ಜೂ.17 ರಿಂದ ಮಹಾಕಾವ್ಯಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ

ಇಸ್ಕಾನ್ ಹಾಗೂ ಭಾರತೀಯ ವಿದ್ಯಾಭವನ ಸಂಸ್ಥೆಗಳು ಈ ಬಾರಿ ಮಹಾಕಾವ್ಯಗಳ ಸಂದೇಶಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.
ಮಹಾವ್ಯಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ
ಮಹಾವ್ಯಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ವೇದ ಸಂವಾದ, ಉಪನಿಷತ್ ಸಂದೇಶ, ಮಹಾಪುರಾಣಗಳ ಸಂದೇಶಗಳ ರಾಷ್ಟ್ರೀಯ ಸಮ್ಮೇಳನ ನಡೆಸಿದ್ದ ಇಸ್ಕಾನ್ ಹಾಗೂ ಭಾರತೀಯ  ವಿದ್ಯಾಭವನ ಸಂಸ್ಥೆಗಳು ಈ ಬಾರಿ ಮಹಾಕಾವ್ಯಗಳ ಸಂದೇಶಗಳ ಬಗ್ಗೆ ರಾಷ್ಟ್ರೀಯ  ಸಮ್ಮೇಳನವನ್ನು ಆಯೋಜಿಸಿದೆ.

ರಾಮಾಯಣ, ಮಹಾಭಾರತ ಸೇರಿದಂತೆ ಭಾರತೀಯ ಪೌರಾಣಿಕ ಗ್ರಂಥಗಳ ಮೂಲ ಆಶಯವನ್ನು ಚರ್ಚಿಸುವುದು, ಇಂದಿನ ಯುವ ಪೀಳಿಗೆಗೆ ಮಹಾಕಾವ್ಯ ಕುರಿತ ಸಾಮಾನ್ಯ ಗ್ರಹಿಕೆಯನ್ನು ನೀಡುವುದು ಈ ಸಮ್ಮೇಳನದ ಆಶಯ.

ಜೂ.17 ರಿಂದ ಜೂ.20 ವರೆಗೆ (ನಾಲ್ಕು ದಿನ) ನಡೆಯಲಿರುವ ಈ ಸಮ್ಮೇಳನದಲ್ಲಿ  ವಿವಿಧ ರಾಜ್ಯಗಳ 60ಕ್ಕೂ ಹೆಚ್ಚು ವಿದ್ವಾಂಸರು ಮಹಾಕಾವ್ಯಗಳ ಬಗ್ಗೆ ಮಾತನಾಡಲಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಧರ್ಮ–ಭಾಷೆಗಳ ಜಾನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ಸರಣಿ ನಡೆಯಲಿದೆ.

ಭಾರತೀಯ ಭಾಷೆಗಳಾದ ಕನ್ನಡ, ತುಳು, ಕೊಡವ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಗುಜರಾತಿ, ಪಂಜಾಬಿ, ಕಾಶ್ಮೀರಿ, ಉರ್ದು ಜೊತೆಗೆ ಹೊರ ದೇಶದ ಗ್ರೀಕ್, ಲ್ಯಾಟಿನ್ ಭಾಷೆಗಳ ಮಹಾಕಾವ್ಯಗಳ ಬಗ್ಗೆಯೂ ಚರ್ಚೆಯೂ ನಡೆಯಲಿರುವುದು ಈ ಬಾರಿಯ ವಿಶೇಷತೆಯಾಗಿದೆ. ವಿಚಾರ ಗೋಷ್ಠಿಯ ನಡುವೆ ಪ್ರಸ್ತುತಪಡಿಸಲಾಗುವ ಮಹಾಕಾವ್ಯದ ಆಯ್ದ ಭಾಗಗಳ ಗಮಕ, ಗಾಯನ, ನೃತ್ಯರೂಪಕ, ಗಮಕಕ್ಕೆ ಶತಾವಧಾನಿ ಆರ್. ಗಣೇಶ್ ವ್ಯಾಖ್ಯಾನ ಮಾಡಲಿದ್ದಾರೆ. ಮಹಾಕಾವ್ಯ’ ಸಮ್ಮೇಳನದ ಕಾರ್ಯಕ್ರಮ  www.vvblive.org ವೆಬ್ ಸೈಟ್ ನಲ್ಲಿ    ನೇರಪ್ರಸಾರವಾಗಲಿದೆ.

ಸ್ಥಳ: ಇಸ್ಕಾನ್, ಮಲ್ಟಿ ವಿಷನ್ ಥಿಯೇಟರ್, ಹರೇಕೃಷ್ಣ ಹಿಲ್, ಪಶ್ಚಿಮ ಕಾರ್ಡ್‌ ರಸ್ತೆ, ಬೆಳಿಗ್ಗೆ 10.30.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com