
ಮೈಸೂರು: ಬಹು ಕುತೂಹಲ ಮೂಡಿಸಿರುವ ಮೈಸೂರು ರಾಜಮನೆತನದ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅದ್ದೂರಿ ವಿವಾಹ ಮಹೋತ್ಸವಕ್ಕೆ ಅರಮನೆ ಸಜ್ಜಾಗುತ್ತಿದೆ.
ಅರಮನೆಯಲ್ಲಿ ವಿವಾಹ ಸಂಬಂಧ ಕಾರ್ಯಕ್ರಮಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಜೂನ್ 23 ರಿಂದ 28 ರ ವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.
ರಾಜಮಾತೆ ಪ್ರಮೋದಾ ದೇವಿ ಅವರು ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಪತ್ರ ಬರೆದು ಜೂನ್ 23 ರಿಂದ 28 ವರೆಗೆ ಅರಮನೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲು ಮನವಿ ಮಾಡಿದ್ದಾರೆ.
ರಾಜಸ್ಥಾನದ ದುಂಗರ್ಪುರ್ ರಾಜಮನೆತನದ ರಿಶಿಕಾಕುಮಾರಿ ಮನವಿ ಅವರನ್ನು ಯದುವೀರ್ ಅವರು ಜೂನ್ 27 ರಂದು ವಿವಾಹವಾಗಲಿದ್ದಾರೆ. 28 ರಂದು ಅರಮನೆಯಲ್ಲಿ ಅರತಕ್ಷತೆ ನಡೆಯಲಿದೆ.
ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ವಿವಾಹ ಮಹೋತ್ಸವ ನಡೆಸಲಾಗುತ್ತಿದೆ.
Advertisement