ಯೋಗೇಶಗೌಡ ಕೊಲೆ ಪ್ರಕರಣ ಸಂಬಂಧ ಬಸವರಾಜ ಮುತಗಿ, ವಿನಾಯಕ ಕಟಗಿ, ವಿಕ್ರಮ್ ಬಳ್ಳಾರಿ, ಕೀರ್ತಿಕುಮಾರ್ ಕುರಹಟ್ಟಿ ಹಾಗೂ ಸಂದೀಪ್ ಎಂಬ ಆರೋಪಿಗಳನ್ನು ನಿನ್ನೆ ಧಾರವಾಡ ಪೊಲೀಸರು ಬಂಧಿಸಿದ್ದರು. ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.