ಕರ್ತವ್ಯದ ಸಮಯದಲ್ಲಿ ರಿವಾಲ್ವರ್ ಜೊತೆಗೆ ಇಟ್ಟುಕೊಳ್ಳಿ: ಎಸ್. ಎನ್ ಮೆಘರಿಕ್

ಸಬ್ ಇನ್​ಸ್ಪೆಕ್ಟರ್ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳು ಕರ್ತವ್ಯದ ವೇಳೆ ಕಡ್ಡಾಯವಾಗಿ ರಿವಾಲ್ವರ್ ಇಟ್ಟುಕೊಂಡಿರಬೇಕೆಂದು ನಗರ ಪೊಲೀಸ್ ...
ಎನ್.ಎಸ್ ಮೆಘರಿಕ್
ಎನ್.ಎಸ್ ಮೆಘರಿಕ್

ಬೆಂಗಳೂರು: ಸಬ್ ಇನ್​ಸ್ಪೆಕ್ಟರ್ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳು ಕರ್ತವ್ಯದ ವೇಳೆ ಕಡ್ಡಾಯವಾಗಿ ರಿವಾಲ್ವರ್ ಇಟ್ಟುಕೊಂಡಿರಬೇಕೆಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಆದೇಶಿಸಿದ್ದಾರೆ.

ಶಿವಾಜಿನಗರದಲ್ಲಿ ರೌಡಿ ಪರ್ವೆಜ್ ಶೂಟೌಟ್ ನಡೆಸಿ ಹತ್ಯೆ ಮಾಡಿದ ಆರೋಪಿಗಳ ಬಂಧನದ ವೇಳೆ ಎಚ್​ಬಿಆರ್ ಲೇಔಟ್​ನಲ್ಲಿ ರೌಡಿ ಶಬ್ಬೀರ್ ಪಿಸ್ತೂಲ್ ತೋರಿಸಿ ಕೆ.ಜಿ.ಠಾಣೆಯ ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ್ದ. ಜೀವ ರಕ್ಷಣೆಗಾಗಿ ಇನ್​ಸ್ಪೆಕ್ಟರ್ ಶ್ರೀನಿವಾಸ್ ರಿವಾಲ್ವರ್​ನಿಂದ ಶಬ್ಬೀರ್ ಮತ್ತು ಬರ್ಕತ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಈ ಘಟನೆಯ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ಎಸ್​ಐ ಹಾಗೂ ಅದಕ್ಕಿಂತ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ (ಸಂಚಾರ, ನಗರಸಶಸ್ತ್ರ ಮೀಸಲು ಪಡೆ ಸೇರಿ) ಇಲಾಖೆಯಿಂದ ರಿವಾಲ್ವರ್ ನೀಡಲಾಗಿದೆ. ಕೆಲವರು ಕರ್ತವ್ಯದ ವೇಳೆ ರಿವಾಲ್ವರ್ ಇಟ್ಟುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಇನ್ನು ಮುಂದೆ ರಿವಾಲ್ವರ್ ತೆಗೆದುಕೊಂಡು ಹೋಗದಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಆದೇಶದಲ್ಲಿ ಮೇಘರಿಕ್ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com