ರಸ್ತೆ ಸಂಚಾರ ನಿಯಮ ಉಲ್ಲಂಘನೆ: ಎರಡು ದಿನಗಳಲ್ಲಿ 1,125 ಕೇಸು ದಾಖಲು

ಶುಕ್ರವಾರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಅಕ್ಷರಶಃ ಸಿಂಹಸ್ವಪ್ನರಾಗಿದ್ದರು. ಪೊಲೀಸರು ನಡೆಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶುಕ್ರವಾರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಅಕ್ಷರಶಃ ಸಿಂಹಸ್ವಪ್ನರಾಗಿದ್ದರು. ಪೊಲೀಸರು ನಡೆಸಿದ ವಿಶೇಷ ಅಭಿಯಾನದಲ್ಲಿ ಡ್ರಾಗ್ ರೇಸಿಂಗ್, ವೇಗವಾಗಿ ಚಲಾಯಿಸುತ್ತಿದ್ದ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ಗಾಡಿ ಓಡಿಸುವುದು, ಕುಡಿದು ವಾಹನ ಚಲಾವಣೆ ಇತ್ಯಾದಿ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಸಾವಿರದ 987 ಕೇಸು ದಾಖಲಿಸಿದ್ದಾರೆ. ಇನ್ನು 154 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯಾಯವ್ಯಾಪ್ತಿಯ ಸಂಚಾರ ಪೊಲೀಸ್ ತನಿಖಾಧಿಕಾರಿಗಳನ್ನೊಳಗೊಂಡ ವಿಶೇಷ ತಂಡಗಳು ಮೊನ್ನೆ ಗುರುವಾರ ಮತ್ತು ನಿನ್ನೆ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಗರದ ಅಲ್ಲಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಅತಿ ಹೆಚ್ಚಿನ ಕೇಸು ದಾಖಲಾಗಿದ್ದು ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ.(1,125 ಕೇಸು ದಾಖಲು), ಅದರ ನಂತರ ಹಿಂಬದಿ ಸವಾರರು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದು, (335) ಹಾಗೂ ಒನ್ ವೇಯಲ್ಲಿ ಗಾಡಿ ಚಲಾಯಿಸಿ ನಿಯಮ ಉಲ್ಲಂಘನೆ(181).

ಸಂಚಾರಿ ಪೊಲೀಸರಿಗೆ ಈ ಮೊದಲು ಸುತ್ತೋಲೆ ಹೊರಡಿಸಿದ್ದ ಪೊಲೀಸ್ ಇಲಾಖೆ, ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿತ್ತು. ರಾತ್ರಿ ಹೊತ್ತಿನಲ್ಲಿ ಹೆಚ್ಚು ಮಂದಿ ವಾಹನ ಚಾಲಕರು ರಸ್ತೆ ಸಂಚಾರ ನಿಯಮ ಉಲ್ಲಂಘಿಸುತ್ತಾರೆ ಎಂದು ಪೊಲೀಸರಿಗೆ ಬಂದ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಈ ವಿಶೇಷ ಅಭಿಯಾನ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com