ಶಾಲಾ ಮಕ್ಕಳಿಗೆ ಬಿಸಿಯೂಟ ಒದಗಿಸುವ ಲಂಚ್ ಬೆಲ್

ಶಾಲೆಗಳು ಮತ್ತೆ ಆರಂಭವಾಗುತ್ತಿದ್ದಂತೆ ಮಕ್ಕಳಿಗೆ ಊಟದ ಡಬ್ಬಿಗೆ ಏನು ಕಳುಹಿಸುವುದು, ಏನು ಮಾಡಿಕೊಟ್ಟರೂ ಕೂಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶಾಲೆಗಳು ಮತ್ತೆ ಆರಂಭವಾಗುತ್ತಿದ್ದಂತೆ ಮಕ್ಕಳಿಗೆ ಊಟದ ಡಬ್ಬಿಗೆ ಏನು ಕಳುಹಿಸುವುದು, ಏನು ಮಾಡಿಕೊಟ್ಟರೂ ಕೂಡ ಸರಿಯಾಗಿ ತಿಂದು ಬರುವುದಿಲ್ಲವಲ್ಲ ಎಂಬ ಚಿಂತೆ ಅಮ್ಮಂದಿರದ್ದು. ನಿಮ್ಮ ಚಿಂತೆಗೆ ಕೊಂಚ ಪರಿಹಾರ ನೀಡಲಿದೆ ಲಂಚ್ ಬೆಲ್ ಎಂಬ ಹೊಸ ಕಂಪೆನಿ. ನಿಮ್ಮ ಮಗುವಿನ ಶಾಲೆಯಲ್ಲಿ ಲಂಚ್ ಗೆ ಬೆಲ್ ಹೊಡೆದ ತಕ್ಷಣ ಬಿಸಿಬಿಸಿ, ಸೊಗಸಾದ ಆಹಾರ ಪದಾರ್ಥವನ್ನು ನಿಮ್ಮ ಮಗುವಿಗೆ ತಂದು ತಲುಪಿಸುತ್ತಾರೆ.

ನಿಮ್ಮ ಮಗುವಿನ ಮಧ್ಯಾಹ್ನ ಊಟಕ್ಕೆ ಲಂಚ್ ಬಾಕ್ಸ್ ಬೇಕು ಎಂದು ಆರ್ಡರ್ ಮಾಡಿದರೆ ಸಾಕು ಶಾಲೆಯ ಮುಖ್ಯಸ್ಥರಿಗೆ ತೆಗೆದುಕೊಂಡು ಹೋಗಿ ತಲುಪಿಸುತ್ತಾರೆ ಎನ್ನುತ್ತಾರೆ ಲಂಚ್ ಬೆಲ್ ಮಳಿಗೆಯ ಸ್ಥಾಪಕರಲ್ಲೊಬ್ಬರಾದ ವೆಂಕಟೇಶ್ ಜಿ.

ಮಾಜಿ ಐಟಿ ಉದ್ಯೋಗಿಗಳು ಸೇರಿ ಹುಟ್ಟುಹಾಕಿರುವ ಕಂಪೆನಿ ಲಂಚ್ ಬೆಲ್. ''ನಾವು ಆಫೀಸಿನ ಕೆಫೆಟೇರಿಯಾದಲ್ಲಿ ತಿಂದು ಹತಾಶೆಗೀಡಾಗಿದ್ದೆವು. ಅಲ್ಲಿ ಆಹಾರ ಪದಾರ್ಥಗಳು ಆರೋಗ್ಯಕರವಾಗಿಯೂ ಇರುವುದಿಲ್ಲ, ಜೊತೆಗೆ ದರ ಕೂಡ ಕಡಿಮೆಯೇನಲ್ಲ. ಮನೆಯ ಆಹಾರ, ಪದಾರ್ಥಗಳಿಗೆ ಯಾವುದೂ ಸಮನಲ್ಲ ಎಂದು ನಾವು ತೀರ್ಮಾನಿಸಿದ್ದೆವು. ಇದುವೇ ಲಂಚ್ ಬೆಲ್ ಕಂಪೆನಿ ಹುಟ್ಟುಹಾಕಲು ನೆರವಾಯಿತು ಎನ್ನುತ್ತಾರೆ ವೆಂಕಟೇಶ್.

ಮಕ್ಕಳಿಗೆ ಊಟ ಬೇಕಾದರೆ ಪೋಷಕರು ಕಂಪೆನಿಯಲ್ಲಿ ಹೆಸರು ದಾಖಲಿಸಿಕೊಳ್ಳಬೇಕು. ಶಾಲಾ ಮಕ್ಕಳ ಲಂಚ್ ಬ್ರೇಕ್ ಗೆ 15 ನಿಮಿಷ ಮುಂಚೆ ಶಾಲೆಗೆ ಊಟದ ಡಬ್ಬಿ ಹಿಡಿದುಕೊಂಡು ನಮ್ಮ ಸಿಬ್ಬಂದಿ ಹೋಗುತ್ತಾರೆ.ಅಲ್ಲಿ 5 ನಿಮಿಷವಿದ್ದು ಊಟದ ಡಬ್ಬಿ ಕೊಟ್ಟು ಬಿಟ್ಟು ಬರುತ್ತಾರೆ. ಇದುವರೆಗೆ 67 ಪೋಷಕರು ಮತ್ತು 8 ಶಾಲೆಗಳು ತಮ್ಮ ಮನವಿಯನ್ನು ಕಳುಹಿಸಿದ್ದಾರೆ.

ಸಂಬಂಧಪಟ್ಟ ಮಗುವಿಗೆ ಲಂಚ್ ಬಾಕ್ಸ್ ತಲುಪಿದೆಯೇ, ಇಲ್ಲವೇ ಎಂದು ನೋಡಲು ನಾಲ್ಕು ಸಂಖ್ಯೆಯ ನಂಬರ್ ವೊಂದನ್ನು ಮಗುವಿಗೆ ಮತ್ತು ಪೋಷಕರಿಗೆ ನೀಡಲಾಗುತ್ತದೆ. ಶಾಲೆಗೆ ಊಟ ಪೂರೈಸುವ ಸಿಬ್ಬಂದಿಯ ಪೂರ್ವಾಪರ ವಿಚಾರಣೆ ಮಾಡಿಯೇ ತೆಗೆದುಕೊಳ್ಳಲಾಗುತ್ತದೆ. ಅವರ ಗುರುತು, ವಿಳಾಸ ನೋಡಲಾಗುತ್ತದೆ. ಪೊಲೀಸ್ ಪರಿಶೀಲನೆ ಕೂಡ ಮಾಡಿಸುತ್ತೇವೆ ಎಂದು ವಿವರ ನೀಡುತ್ತಾರೆ.

ಇಂದು ಮಕ್ಕಳಿಗೆ ನೀಡಲಾಗುತ್ತಿರುವ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ವಿಸ್ತರಿಸುವ ಯೋಜನೆ ಕಂಪೆನಿಯದ್ದು.
ಒಂದು ತಿಂಗಳಿಗೆ ಮಕ್ಕಳ ಊಟದ ಡಬ್ಬಿಯ ಖರ್ಚು 600 ರೂಪಾಯಿ ಮತ್ತು ತೆರಿಗೆ, 3 ತಿಂಗಳಿಗೆ 1,650 ಮತ್ತು ತೆರಿಗೆ (ಶೇಕಡಾ 25ರಷ್ಟು ಡಿಸ್ಕೌಂಟ್ ಮೊದಲ ತಿಂಗಳ ಸರ್ವಿಸ್ ), 3,300 ರೂಪಾಯಿ ಮತ್ತು ತೆರಿಗೆ 6 ತಿಂಗಳಿಗೆ(ಶೇಕಡಾ 50ರಷ್ಟು ಡಿಸ್ಕೌಂಟ್ ಮೊದಲ ತಿಂಗಳ ಸರ್ವಿಸ್). ವಿವರಗಳಿಗೆ ಮೊಬೈಲ್ ಸಂಖ್ಯೆ 7899916916 ಕರೆ ಮಾಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com