ಶಾಸಕರ ಭವನದಲ್ಲಿ ಬಾಂಬ್ ಪ್ರಕರಣ: ಗಿರೀಶ್ ಮಟ್ಟೆಣ್ಣನವರ್ ಖುಲಾಸೆ

2003ರ ಶಾಸಕರ ಭವನದಲ್ಲಿ ನೆಲೆಸಿರುವ 'ಭ್ರಷ್ಟ ರಾಜಕಾರಣಿ'ಗಳನ್ನು ಬೆದರಿಸಲು ಬಾಂಬ್‌ ಇಟ್ಟ ಪ್ರಕರಣದ ಪ್ರಮುಖ ಆರೋಪಿ ಗಿರೀಶ್‌ ಮಟ್ಟಣ್ಣನವರ್‌ ಹಾಗೂ...
ಗಿರೀಶ್ ಮಟ್ಟೆಣ್ಣನವರ್
ಗಿರೀಶ್ ಮಟ್ಟೆಣ್ಣನವರ್
ಬೆಂಗಳೂರು: 2003ರ ಶಾಸಕರ ಭವನದಲ್ಲಿ ನೆಲೆಸಿರುವ 'ಭ್ರಷ್ಟ ರಾಜಕಾರಣಿ'ಗಳನ್ನು ಬೆದರಿಸಲು ಬಾಂಬ್‌ ಇಟ್ಟ ಪ್ರಕರಣದ ಪ್ರಮುಖ ಆರೋಪಿ ಗಿರೀಶ್‌ ಮಟ್ಟಣ್ಣನವರ್‌ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಸೋಮವಾರ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಸುಮಾರು 13 ವರ್ಷಗಳ ನಂತರ ಇಂದು ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ನಗರದ 66ನೇ ಸಿವಿಲ್ ಹಾಗೂ ಸೆಷೆನ್ಸ್ ಕೋರ್ಟ್, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮೊದಲ ಆರೋಪಿ ಗಿರೀಶ್ ಮಟ್ಟೆಣ್ಣನವರ್ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಶಾಸಕರ ಭವನದಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಹುಸಿ ಬಾಂಬ್ ಕರೆ ಮಾಡಿದ್ದ ಘಟನೆಯಲ್ಲಿ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿರುವುದಾಗಿ ನ್ಯಾಯಾಲಯ ಹೇಳಿದೆ.
ಶಾಸಕರ ಭವನದಲ್ಲಿ ನೆಲೆಸಿರುವ ಭ್ರಷ್ಟ ರಾಜಕಾರಣಿಗಳನ್ನು ಬೆದರಿಸುವ ನಿಟ್ಟಿನಲ್ಲಿ ಅಂದು (2003) ಎಸ್ ಐ ಆಗಿದ್ದ ಮಟ್ಟಣ್ಣನವರ್ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com