
ಮೈಸೂರು: ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೆ ತರುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ ಪದೇಪದೇ ಅದೇ ಮೂಡನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಮೊನ್ನೆಯಷ್ಟೇ ತಮ್ಮ ಕಾರಿನ ಮೇಲೆ ಕಾಗೆ ಕೂತಿದ್ದರಿಂದ ಕಾರು ಬದಲಾವಣೆ ಮಾಡಿದ ಸಿದ್ದರಾಮಯ್ಯ ವ್ಯಕ್ತಿಯೊಬ್ಬರು ತಂದ ಶಾಲನ್ನು ಸ್ವೀಕರಿಸಿದೆ ನಿರಾಕರಿಸಿದ್ದಾರೆ.
ಮೈಸೂರಿನ ನಿವಾಸದಿಂದ ಬೆಂಗಳೂರಿಗೆ ಹೊರಡುವ ವೇಳೆ, ಶಾರದ ನಿವಾಸದ ಬಳಿ ಬಂದ ವ್ಯಕ್ತಿಯೊಬ್ಬ ನಾನು ಕೊಳ್ಳೇಗಾಲದವನು, ದೇವರ ಪೂಜೆ ಮಾಡಿ ವಸ್ತ್ರ ತಂದಿದ್ದೇನೆ ತೆಗೆದುಕೊಳ್ಳಿ ಎನ್ನುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಆತನಿಂದ ದೂರ ಸರಿದರು ಎನ್ನಲಾಗಿದೆ. ಕೊಳ್ಳೇಗಾಲದ ವ್ಯಕ್ತಿ ದೇವರಿಗೆ ಕಳಸ ಪೂಜೆ ಮಾಡಿ ತಂದಿದ್ದ ಶಾಲನ್ನು ಕೊಡಲು ಮುಂದಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಆದರೆ ಆ ಶಾಲನ್ನು ಸ್ವೀಕರಿಸದ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೇ ಕಾರನ್ನು ಏರಿದ್ದರು. ಆಗ ಕೊಳ್ಳೇಗಾಲದ ವ್ಯಕ್ತಿ ಸಿಎಂ ಕುಳಿತಿದ್ದ ಕಾರಿನ ಬಳಿ ಬಂದು, ಸಿದ್ದರಾಮಣ್ಣ ದೇವ್ರು ನಿಂಗೆ ಒಳ್ಳೇದು ಮಾಡಲ್ಲ ಎಂದು ಶಾಪ ಹಾಕಿದ್ದ!
ತದನಂತರ ಕೊಳ್ಳೇಗಾಲದ ಆ ವ್ಯಕ್ತಿ ಅಪ್ಪ, ಅಮ್ಮನಿಗೆ ಅನಾರೋಗ್ಯವಿದೆ ಚಿಕಿತ್ಸೆಗೆ ಹಣ ಬೇಕೆಂದು ಮನವಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
Advertisement