ಗುಂಡಿ ರಸ್ತೆ, ಅಧಿಕ ಟೋಲ್ ಶುಲ್ಕ: ಇದು ನೈಸ್ ರಸ್ತೆಯ ಸ್ಥಿತಿ

ನೈಸ್ ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರು ಅಧಿಕ ಟೋಲ್ ಶುಲ್ಕ ನೀಡಬೇಕಾಗಿರುವುದು ಮಾತ್ರವಲ್ಲದೆ ಬೂತ್ ಗಳಲ್ಲಿ...
ನೈಸ್ ರಸ್ತೆಯ ಟೋಲ್ ಬೂತ್ ನಲ್ಲಿ ವಿವಿಧ ದರಗಳ ಪಟ್ಟಿ
ನೈಸ್ ರಸ್ತೆಯ ಟೋಲ್ ಬೂತ್ ನಲ್ಲಿ ವಿವಿಧ ದರಗಳ ಪಟ್ಟಿ

ಬೆಂಗಳೂರು: ನೈಸ್ ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರು ಅಧಿಕ ಟೋಲ್ ಶುಲ್ಕ ನೀಡಬೇಕಾಗಿರುವುದು ಮಾತ್ರವಲ್ಲದೆ ಬೂತ್ ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಎಂಬ ಕೂಗು ಸವಾರರದ್ದು.

ನಾಗರಬಾವಿ ನಿವಾಸಿ ವಿವೇಕ್ ನೈಸ್ ರಸ್ತೆ ಮೂಲಕವೇ ಮೈಸೂರು ರಸ್ತೆಯಿಂದ ಬನ್ನೇರುಘಟ್ಟಕ್ಕೆ ಪ್ರಯಾಣಿಸುತ್ತಿದ್ದು, ಇದನ್ನು ಸಾಧಾರಣ ರಸ್ತೆ ಎಂದು ಹೇಳುತ್ತಾರೆ.
ಟ್ರಾಫಿಕ್ ಸಿಗ್ನಲ್ ನ್ನು ತಪ್ಪಿಸಲು ಮಾತ್ರ ನಾನು ನೈಸ್ ರಸ್ತೆ ಮೂಲಕವಾಗಿ ಸಂಚರಿಸುತ್ತೇನೆ. ಆದರೆ ಟೋಲ್ ಬೂತ್ ಬಳಿ ತುಂಬಾ ಹೊತ್ತು ನಿಲ್ಲಬೇಕಾಗುತ್ತದೆ. ಕನಿಷ್ಟ 15 ನಿಮಿಷ ಅಲ್ಲಿ ಕಾಯಬೇಕಾಗುತ್ತದೆ. ಇನ್ನು ವಾರಾಂತ್ಯದಲ್ಲಿ 45 ನಿಮಿಷಗಳ ಕಾಲ ಕಾಯಬೇಕು ಎನ್ನುತ್ತಾರೆ ವಿವೇಕ್.

ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಶ್ರೀಕರ ವಿ ರಮನ್, ಮೈಸೂರು ರಸ್ತೆ ಮೂಲಕ ನೈಸ್ ರಸ್ತೆಯಲ್ಲಿ ಕಾರಿನಲ್ಲಿ ಒಂದು ಬಾರಿ ಸಂಚರಿಸುವುದಕ್ಕೆ ಟೋಲ್ ಶುಲ್ಕ 118 ರೂಪಾಯಿ. ಸುಮಾರು 27 ಕಿಲೋ ಮೀಟರ್ ಆಗುತ್ತದೆ. ಅಂದರೆ ಕಿಲೋ ಮೀಟರ್ ಗೆ 4 ರೂಪಾಯಿಗಳಿಗೂ ಹೆಚ್ಚು ನೀಡಬೇಕು. ಅಂದರೆ ನೈಸ್ ರಸ್ತೆಯ ಟೋಲ್ ಶುಲ್ಕ ಭಾರತದಲ್ಲಿಯೇ ಅಧಿಕವಾಗಿದೆ ಎನ್ನುತ್ತಾರೆ.

ಕೆಲವು ವರ್ಷಗಳ ಹಿಂದೆ ಇದ್ದಷ್ಟು ರಸ್ತೆ ಈಗ ಸರಿಯಾಗಿಲ್ಲ. ನಮಗೆ ಬೇರೆ ಆಯ್ಕೆಯಿಲ್ಲ, ನೈಸ್ ರೋಡ್ ಮೂಲಕವೇ ಹೋಗಬೇಕು. ನಾವು ಹೆಚ್ಚು ಹಣ ಕೊಟ್ಟರೂ ಕೂಡ ಹಣ ಕೊಟ್ಟದ್ದಕ್ಕೆ ತಕ್ಕ ಮೂಲಭೂತ ಸೌಕರ್ಯ ದೊರಕುವುದಿಲ್ಲ ಎನ್ನುತ್ತಾರೆ ಶ್ರೀಕರ.

ನಂದಿನಿ ಲೇ ಔಟ್ ನಿವಾಸಿಯಾಗಿರುವ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವ ಶಿವರಾಮ್, ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ನೈಸ್ ರಸ್ತೆಯಲ್ಲಿ ಸಂಚರಿಸಲು 65 ರೂಪಾಯಿ ನೀಡುತ್ತೇನೆ. ಮನೆ ಮತ್ತು ಕಚೇರಿಗೆ 20 ಕಿಲೋ ಮೀಟರ್ ಅಂತರವಿದೆ. ಅಂದರೆ ಕಿಲೋ ಮೀಟರ್ ಗೆ 3 ರೂಪಾಯಿಗೂ ಅಧಿಕ ಹಣ ನೀಡಿದಂತಾಗುತ್ತದೆ. ಆದರೆ ರಸ್ತೆಯ ಅಲ್ಲಲ್ಲಿ ಗುಂಡಿಗಳಿದ್ದು ಜಾಗ್ರತೆಯಿಂದ ಚಲಾಯಿಸಬೇಕಾಗುತ್ತದೆ ಎನ್ನುತ್ತಾರೆ.

ಹೊಸಕೆರೆಹಳ್ಳಿ ನಿವಾಸಿ ಮಧುಮಿತಾ, ಹೆಚ್ಚು ಹಣ ನೀಡುವುದು ದೊಡ್ಡ ವಿಷಯವಲ್ಲ. ಬನಶಂಕರಿ ಹತ್ತಿರ ಪಿಇಎಸ್ ಕಾಲೇಜು ಸಮೀಪ ಸಂಪರ್ಕ ರಸ್ತೆಯಲ್ಲೆಲ್ಲಾ ಹೊಂಡ-ಗುಂಡಿಗಳಿವೆ. ಗುಂಡಿ ರಸ್ತೆಯಲ್ಲಿ ಓಡಾಡುವುದಕ್ಕೆ ನಾವು ಹಣ ನೀಡಬೇಕಾಗಿರುವುದು ಬೇಸರದ ಸಂಗತಿ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com