ನಂದಿ ಬೆಟ್ಟಕ್ಕೆ ಕೇಬಲ್ ಕಾರ್: ನನಸಾಗಲಿದೆ ಶಂಕರ್‌ನಾಗ್ ಕನಸು

ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಕೇಬಲ್ ಕಾರ್ ವ್ಯವಸ್ಥೆ ಮಾಡಬೇಕು ಎಂದು ಕನಸು ಕಂಡಿದ್ದ ನಟ ಶಂಕರ್‌ನಾಗ್ ಅವರ ಕನಸೀಗ ನನಸಾಗುವ...
ನಂದಿ ಬೆಟ್ಟ
ನಂದಿ ಬೆಟ್ಟ
Updated on
ಬೆಂಗಳೂರು: ನಂದಿ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಕೇಬಲ್ ಕಾರ್ ವ್ಯವಸ್ಥೆ ಮಾಡಬೇಕು ಎಂದು ಕನಸು ಕಂಡಿದ್ದ ನಟ ಶಂಕರ್‌ನಾಗ್ ಅವರ ಕನಸೀಗ ನನಸಾಗುವ ಕಾಲ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೌನ್ಸಿಲ್ ಈ ಬಗ್ಗೆ ಅಧ್ಯಯನ ನಡೆಸಿ ಚಿಕ್ಕಬಳ್ಳಾಪುರ ಡೆಪ್ಯುಟಿ ಆಯುಕ್ತ ಎಂವಿ ವೆಂಕಟೇಶ್ ಅವರ ಮೂಲಕ 2016 ಮೇ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಗೆ ವರದಿ ಸಲ್ಲಿಸಲಿದೆ.
ನಂದಿ ಬೆಟ್ಟದ ತಪ್ಪಲಿಗೆ ಪ್ರವಾಸಿಗರನ್ನು ಕರೆದೊಯ್ಯುವ ಕೇಬಲ್ ಕಾರ್ ವ್ಯವಸ್ಥೆಯ ಬಗ್ಗೆ ಈಗಾಗಲೇ ಅಧ್ಯಯನ ಆರಂಭವಾಗಿದೆ. ಎರಡು ಸಮಾನಾಂತರ  ರೋಪ್‌ವೇಗಳಲ್ಲಿ ಎರಡು ಕೇಬಲ್ ಕಾರುಗಳಲ್ಲಿ  20 ರಿಂದ 30 ಮಂದಿಯನ್ನು ಕರೆದೊಯ್ಯುವ ವ್ಯವಸ್ಥೆಯ ಪ್ರಾಥಮಿಕ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದರೆ ನಂದಿ ಬೆಟ್ಟಕ್ಕೆ ಬರುವ ವಾಹನ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ಸಮುದ್ರ ಮಟ್ಟದಿಂದ 1,831 ಅಡಿ ಎತ್ತರದ್ದಿ ನಂದಿ ಬೆಟ್ಟವಿದ್ದು, ಈ ಮೂಲಕ ಪ್ರಸ್ತುತ ಪ್ರವಾಸಿತಾಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬಹುದಾಗಿದೆ. 
ಶಂಕರ್ ನಾಗ್ ಅವರ ಕನಸು: ಖ್ಯಾತ ನಟ ಶಂಕರ್‌ನಾಗ್ ಅವರ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ನಂದಿ ಬೆಟ್ಟಕ್ಕೆ ರೋಪ್‌ವೇ ಯೋಜನೆ ಶಂಕರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಸೆಪ್ಟೆಂಬರ್ 30, 1990ರಲ್ಲಿ ಶಂಕರ್ ನಾಗ್ ಅಪಘಾತದಲ್ಲಿ ಸಾವಿಗೀಡಾಗುವುದರೊಂದಿಗೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಅನಂತರ ಕರ್ನಾಟಕ ಪ್ರವಾಸೋದ್ಯಮದ ಹೊಸ ಯೋಜನೆ (2014-2019) ಪ್ರಕಾರ ನಂದಿ ಬೆಟ್ಟಕ್ಕೆ ಕೇಬಲ್ ಕಾರ್ ವ್ಯವಸ್ಥೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. 
30 ವರುಷಗಳ ಹಿಂದೆ ಅಂದರೆ 1986ರಲ್ಲಿ ನಂದಿ ಬೆಟ್ಟಕ್ಕೆ ರೋಪ್‌ವೇ ವ್ಯವಸ್ಥೆ ಕಲ್ಪಿಸಿ ಅಲ್ಲಿ ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವ ಯೋಜನೆ ಬಗ್ಗೆ ಶಂಕರ್ ನಾಗ್ ನನ್ನಲ್ಲಿ ಹೇಳಿದ್ದರು. ನಾನಾಗ ಬಸುರಿ. ನಾವು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗ ಅವರು ಈ ವಿಷಯವನ್ನು  ಹೇಳಿದ್ದರು. ಈ ಯೋಜನೆ ಬಗ್ಗೆ ಅವರು ನೀಲನಕ್ಷೆಯನ್ನೂ ತಯಾರಿಸಿದ್ದರು. ಆಮೇಲೆ ಅವರು ಕಂಟ್ರಿ ಕ್ಲಬ್ ಮತ್ತು ಇತರ ಯೋಜನೆಗಳಲ್ಲಿ ಬ್ಯುಸಿಯಾದುದರಿಂದ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ. ಅವರು 6 ತಿಂಗಳು ಕಾಲ ಬದುಕಿರುತ್ತಿದ್ದರೆ ಈ ಯೋಜನೆಯನ್ನು ಆರಂಭಿಸುತ್ತಿದ್ದರು ಎಂದು ಆರುಂಧತಿ ನಾಗ್ ಹಳೆಯದನ್ನೆಲ್ಲಾ ಮತ್ತೆ ನೆನಪಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com