ಸಂತೋಷ್ ಹೆಗ್ಡೆ
ರಾಜ್ಯ
ಮುಖ್ಯಮಂತ್ರಿಗಳು ಉಡುಗೊರೆ ಪಡೆಯುವುದು, ಬಳಸುವುದು ಅಪರಾಧ: ಸಂತೋಷ್ ಹೆಗ್ಡೆ
ರಾಜ್ಯದ ಮುಖ್ಯಮಂತ್ರಿಗಳು ಬೆರೆಯವರಿಂದ ಉಡುಗೊರೆ ಪಡೆಯುವುದು ಮತ್ತು ಅದನ್ನು ಬಳಸುವುದು ಎರಡೂ ತಪ್ಪೆ...
ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿಗಳು ಬೆರೆಯವರಿಂದ ಉಡುಗೊರೆ ಪಡೆಯುವುದು ಮತ್ತು ಅದನ್ನು ಬಳಸುವುದು ಎರಡೂ ತಪ್ಪೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಗುರುವಾರ ಹೇಳಿದ್ದಾರೆ.
ಇಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್ ಹೆಗ್ಡೆ ಅವರು, ಮುಖ್ಯಮಂತ್ರಿಗಳು ಉಡುಗೊರೆ ಪಡೆಯುವುದು ಹಾಗೂ ಅದನ್ನು ಬಳಸುವುದು ತಪ್ಪು ಮಾತ್ರವಲ್ಲ. ಅದೊಂದು ಅಪರಾಧ ಎಂದು ಅಭಿಪ್ರಾಯ ಪಟ್ಟರು. ಅಲ್ಲದೆ ಸಿಎಂ ವಾಚ್ ಅನ್ನು ಈ ಮೊದಲೇ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಿತ್ತು ಎಂದರು.
ಇದೇ ವೇಳೆ ಸದನದಲ್ಲಿ ಮಹತ್ವದ ವಿಷಯಗಳು ಚರ್ಚೆಯಾಗಬೇಕಿತ್ತು. ಆದರೆ ವಾಚ್ ವಿವಾದ ಚರ್ಚೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಲೋಕಾಯುಕ್ತರು ಹೇಳಿದರು.
ಪ್ರತಿಪಕ್ಷಗಳ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಸಿದ್ದರಾಮಯ್ಯ ಅವರ ಡೈಮಂಡ್ ವಾಚ್ ಅನ್ನು ಅವರು ನಿನ್ನೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರಿಸುವ ಮೂಲಕ, ತಮಗೆ ನೀಡಿದ ದುಬಾರಿ ಉಡುಗೊರೆ ಸರ್ಕಾರದ ಆಸ್ತಿ ಎಂದು ಘೋಷಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ