ಬೆಂಗಳೂರು: ಬ್ಯಾಂಕಾಕ್‌ನಲ್ಲಿ ಪ್ರಥಮ ಬಾರಿ ಮೋಟಾರ್ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಊಬರ್ ಕಂಪನಿ ಇದೀಗ ಬೆಂಗಳೂರಿನಲ್ಲಿ ಬಾಡಿಗೆಗೆ ಬೈಕ್ ಸೇವೆ ಆರಂಭಿಸಿದೆ..ಊಬರ್‌ಮೋಟ್ (UberMOTO) ಎಂಬ ಬೈಕ್ ಸೇವೆ ಗುರುವಾರ ಆರಂಭವಾಗಿದ್ದು ಕಿಮೀಗೆ ರು. 3 ಆಗಿದೆ..ಪ್ರತೀ ರೈಡ್‌ಗೂ ಶೇ. 20ರಷ್ಟು ಕಮಿಷನ್ ದರವನ್ನು ಊಬರ್ ಈಡು ಮಾಡಲಿದ್ದು, ಕ್ಯಾಶ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕವೂ ಬಾಡಿಗೆ ಪಾವತಿ ಮಾಡಬಹುದಾಗಿದೆ..ಊಬರ್‌ಮೋಟೋದಲ್ಲಿ ಸಂಚರಿಸುವಾಗ ಲೈವ್ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಯಾಣಿಕರಿಗೆ ಫೀಡ್‌ಬ್ಯಾಕ್ ನೀಡುವ ವ್ಯವಸ್ಥೆ ಇದೆ ಎಂದು ಬಲ್ಲಮೂಲಗಳು ಹೇಳಿವೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos