ಬೆಂಗಳೂರು: ದಾವಣಗೆರೆಯ ಹೊನ್ನಳ್ಳಿ ತಾಲೂಕಿನ ರೇಷ್ಮಾ ಬಾನು ಎಂಬಾಕೆಗೆ ತನ್ನ ಕೋಳಿ ಫಾರ್ಮ್ ಉದ್ಯಮಕ್ಕಾಗಿ ಧನ ಸಹಾಯ ಬೇಕಿತ್ತು. ಇದಕ್ಕಾಗಿ ಆಕೆ ಬ್ಯಾಂಕ್‌ನ ಮೊರೆ ಹೋಗುವ ಬದಲು WOW ನ ಮೊರೆಹೋದಳು. WOW (Women orbiting Women) ಎಂಬುದು ಕಿಟ್ಟಿ ಪಾರ್ಟಿ ಗ್ಯಾಂಗ್. ಈ ಗ್ಯಾಂಗ್‌ನಲ್ಲಿರುವ ಬಹುತೇಕ ಮಹಿಳೆಯರು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಹೊಂದಿದ್ದಾರೆ. 17 ಮಂದಿಯಿರುವ ಈ ಕಿಟ್ಟಿ ಪಾರ್ಟಿ ಗ್ಯಾಂಗ್ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿ ವ್ಯವಹಾರಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಹಾಯಮಾಡುತ್ತದೆ. ಪ್ರತೀ ತಿಂಗಳಿನ ಎರಡನೇ ಬುಧವಾರ ಈ ಕಿಟ್ಟಿ ಪಾರ್ಟಿ ಸೇರಲಾಗುತ್ತಿದೆ. ಹೀಗೊಂದು ದಿನ ನಾನು ಯಾಕೆ ಇನ್ನೊಬ್ಬರಿಗೆ ಸಹಾಯ ಮಾಡುವ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬ ಯೋಚನೆ ಬಂದಿದ್ದೇ ತಡ ಸದಸ್ಯರೆಲ್ಲರೂ ಕಾರ್ಯಪ್ರವೃತ್ತರಾದರು. ಹಾಗೆ ಈ ಕಿಟ್ಟಿ ಪಾರ್ಟಿಯಲ್ಲಿ ಸಂಗ್ರಹವಾದ ಹಣವನ್ನು ವ್ಯವಸಾಯ ಮಾಡುವ ಮಹಿಳೆಯರಿಗೆ ಸಹಾಯ ಮಾಡುವ ಕಾರ್ಯವನ್ನು ಕೈಗೊಂಡಿತು. ಸಣ್ಣ ಪುಟ್ಟ ಕೈಗಾರಿಕೋದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಈ ಮಹಿಳೆಯರ ಗುಂಪು ಎಲ್ಲರಿಗೂ ಮಾದರಿಯಾಗಿದೆ.
ಪ್ರೇಮಾ ಟಂಡನ್, ಅನುರಾಧಾ ಸರಿನ್ (ಬ್ಯಾಂಕರ್), ಅಂತ್ರಾ ಭಾರ್ಗವ (ಸಿಎ), ಜೀಜಾ ಹರೀಶ್‌ಸಿಂಗ್(ನಿವೃತ್ತ ಐಪಿಎಸ್), ಪ್ರಿಯಾಂಕ ಪೈ (ನೃತ್ಯಗಾರ್ತಿ) ಸೇರಿದಂತೆ ಒಟ್ಟು 17 ಮಂದಿ ಈ ಕಿಟ್ಟಿ ಪಾರ್ಟಿ ಗ್ಯಾಂಗ್ ನಲ್ಲಿದ್ದಾರೆ.