ಕೆಮಿಕಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ: ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಮೈಸೂರು -ತುಮಕೂರು ಹೆದ್ದಾರಿ ನೈಸ್‌ ರಸ್ತೆಯ ಕೆಂಗೇರಿ ಉಪನಗರ ಸಮೀಪದ ಕೆಮ್ಮಘಟ್ಟ ಬಳಿ ಮಂಗಳವಾರ ಸಂಜೆ ಕೆಮಿಕಲ್‌ ಸಾಗಿಸುತ್ತಿದ್ದ ಟ್ಯಾಂಕರ್‌...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೈಸೂರು -ತುಮಕೂರು ಹೆದ್ದಾರಿ ನೈಸ್‌ ರಸ್ತೆಯ ಕೆಂಗೇರಿ ಉಪನಗರ ಸಮೀಪದ ಕೆಮ್ಮಘಟ್ಟ ಬಳಿ ಮಂಗಳವಾರ ಸಂಜೆ ಕೆಮಿಕಲ್‌ ಸಾಗಿಸುತ್ತಿದ್ದ ಟ್ಯಾಂಕರ್‌ ಪಲ್ಟಿಯಾದ ಪರಿಣಾಮ ಇಂದು ಟ್ರಾಫಿಕ್ ಜಾಮ್ ಉಂಟಾಗಿದೆ.

ತಮಿಳುನಾಡಿನ ಕಡೆಗೆ ಥಯೋನಿಲ್ ಎಂಬ ರಾಸಾಯನಿಕವನ್ನು ಸಾಗಿಸುತ್ತಿದ್ದ ಲ್ಯಾನೆಕ್ಸ್‌ ಇಂಡಿಯಾ ಪ್ರೈ .ಲಿ ಗೆ ಸೇರಿದ ಬೃಹತ್‌ ಟ್ಯಾಂಕರ್‌  ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದಲ್ಲೇ ಪಲ್ಟಿಯಾಗಿದೆ.

ಸುಮಾರು 10 ಕೀಲೋ ಮೀಟರ್‌ ವರೆಗೆ ಸಂಚಾರ ಅಸ್ತವ್ಯಸ್ತವಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳೊಂದಿಗೆ ಆಗಮಿಸಿ ಟ್ಯಾಂಕರ್‌ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ. ಟ್ಯಾಂಕರ್‌ ಪಲ್ಟಿಯಾಗಿ ಅದರಲ್ಲಿದ್ದ 50 ಶೇಕಡಾ ರಾಸಾಯನಿಕ ಸೋರಿಕೆಯಾಗಿದೆ. ಇದರ ಪರಿಣಾಮ ಸ್ಥಳೀಯ ಜನರಿಗೆ ರಾಸಾಯನಿಕದ ವಾಸನೆಯಿಂದ ತೀವ್ರ ಕಣ್ಣುರಿ ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಜನರು ಭಯಭೀತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com