9 ತಿಂಗಳ ಮಗುವನ್ನು 3 ಗಂಟೆಗಳ ಕಾಲ ಹೂತಿಟ್ಟ ದಂಪತಿ

ರಾಜ್ಯ ಸರ್ಕಾರ ಮೂಡನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.ಮಗುವಿನ ಅಂಗವೈಕಲ್ಯ ಸರಿಯಾಗುತ್ತೆಂಬ ಭ್ರಮಯಲ್ಲಿ 9 ತಿಂಗಳ ಮಗುವನ್ನು...
ಮಗು ಹೂತಿಟ್ಟ ದಂಪತಿ
ಮಗು ಹೂತಿಟ್ಟ ದಂಪತಿ

ಬೀದರ್: ರಾಜ್ಯ ಸರ್ಕಾರ ಮೂಡನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.ಮಗುವಿನ ಅಂಗವೈಕಲ್ಯ ಸರಿಯಾಗುತ್ತೆಂಬ ಭ್ರಮಯಲ್ಲಿ 9 ತಿಂಗಳ ಮಗುವನ್ನು ಗ್ರಹಣದ ದಿನ 3 ಗಂಟೆಗಳ ಕಾಲ ಮಣ್ಣಿನಲ್ಲಿ ಹೂತಿಟ್ಟಿದ್ದ ಘಟನೆ ಬೀದರ್ ನಲ್ಲಿ ನಡೆದಿದೆ.

ಭಾಗಶಃ ಮಣ್ಣಿನಲ್ಲಿ ಹೂತಿಟ್ಟಿದ್ದ ಮಗು ಅತ್ತು ಅತ್ತು ಮೂರ್ಚೆ ಹೋದ ಮೇಲೆ ಅದನ್ನು ಮಣ್ಣಿನಿಂದ ತೆಗೆಯಲಾಗಿದೆ, ವಿಕಲಾಂಗ ಮಗುವನ್ನು  ಸೂರ್ಯ ಗ್ರಹಣದಂದು ಈ ರೀತಿ ಮಣ್ಣಿನಲ್ಲಿ ಹೂತಿಟ್ಟರೇ ಅಂಗವೈಕಲ್ಯ ಸರಿಯಾಗುತ್ತದೆಂದು ಈ ಭಾಗದ ಜನರು ನಂಬುತ್ತಾರೆ.

ಇನ್ನೂ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಅಶೋಕ್ ಖೇಣಿ ಬೀದರ್ ಕ್ಷೇತ್ರದ ಶೇ. 8ದ0 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಶಿಕ್ಷಣ ಜ್ಞಾನವಿಲ್ಲದ ಇವರು ಮೂಡನಂಬಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ. ಇನ್ನು ಮುಂದೆ ಜನತೆಗೆ ಶಿಕ್ಷಣದ ಮಹತ್ವ ತಿಳಿಸಿ ಸಮಾಜಮುಖಿಯಾಗಿಸುವ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com