''ನನ್ನ ಮಾತು ಕೇಳಲು ಆತ್ಮಹತ್ಯೆಯ ನಾಟಕವಾಡಿದೆ'': ರ್ಯಾಂಕ್ ವಿಜೇತೆಯ ಮನದಾಳದ ಮಾತು

ಆಕೆ ಪ್ರತಿಭಾವಂತೆ.ಕ್ಲಾಸಿನಲ್ಲಿ ಮತ್ತು ವಿಶ್ವವಿದ್ಯಾಲಯದಲ್ಲಿ ಮೊದಲ ರ್ಯಾಂಕ್ ನಲ್ಲಿ ಪಾಸಾಗುತ್ತಿದ್ದಳು.(ಹೆಸರು ಬದಲಾಯಿಸಲಾಗಿದೆ) ಸಂವಹನ ಪದವಿಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆಕೆ ಪ್ರತಿಭಾವಂತೆ.ಕ್ಲಾಸಿನಲ್ಲಿ ಮತ್ತು ವಿಶ್ವವಿದ್ಯಾಲಯದಲ್ಲಿ ಮೊದಲ ರ್ಯಾಂಕ್ ನಲ್ಲಿ ಪಾಸಾಗುತ್ತಿದ್ದಳು.(ಹೆಸರು ಬದಲಾಯಿಸಲಾಗಿದೆ) ಸಂವಹನ ಪದವಿಯ ಕೊನೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ವಿಶ್ವಾಸವಿತ್ತು. ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಮುಂಚೂಣಿಯಲ್ಲಿದ್ದಳು.

ಅಬ್ರಹಾಂ ಎನ್ನುವ ಸಹಪಾಠಿಯ ಜೊತೆ ಸಹ ಅಧ್ಯಯನ ಮಾಡತೊಡಗಿದಳು. ಇಬ್ಬರೂ ಒಬ್ಬರನ್ನೊಬ್ಬರನ್ನು ಹುರಿದುಂಬಿಸುತ್ತಿದ್ದರು. ಒಳ್ಳೆಯ ಅರ್ಥೈಸಿಕೊಳ್ಳುವಿಕೆ ಇಬ್ಬರಲ್ಲಿಯೂ ಇತ್ತು.

ಕೆಲ ದಿನಗಳು ಕಳೆದ ನಂತರ ಆದ್ಯಳ ಪೋಷಕರಿಗೆ ತಮ್ಮ ಮಗಳು ಬೇರೊಬ್ಬನ ಜೊತೆ ಅಷ್ಟು ಹತ್ತಿರವಾಗುವುದು ಇಷ್ಟವಾಗಲಿಲ್ಲ. ''ನಾವು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕಗಳನ್ನು ಗಳಿಸುತ್ತಿದ್ದರೂ ನನ್ನ ಮತ್ತು ಅಬ್ರಹಾಂ ಸಂಬಂಧದ ಬಗ್ಗೆಯೇ ಪೋಷಕರ ಗಮನವೆಲ್ಲ ಕೇಂದ್ರೀಕೃತವಾಗಿತ್ತು. ಹುಡುಗನ ಜೊತೆ ಹೆಚ್ಚು ಬೆರೆಯುತ್ತಿರುವುದರಿಂದ ಪರೀಕ್ಷೆಯಲ್ಲಿ ನಮ್ಮ ಮಗಳು ಚೆನ್ನಾಗಿ ಮಾಡಲಿಕ್ಕಿಲ್ಲ ಎಂದು ನನ್ನ ಪೋಷಕರು ಭಾವಿಸಿದರು'' ಎನ್ನುತ್ತಾಳೆ ಆದ್ಯ.
ಹೀಗಾಗಿ ಆದ್ಯಳ ಪೋಷಕರು ತಮ್ಮ ಮಗಳನ್ನು ಅಬ್ರಹಾಂನಿಂದ ದೂರವುಳಿಯುವಂತೆ ಮಾಡತೊಡಗಿದರು. ಇವರಿಬ್ಬರ ಮೇಲೆ ನಿಗಾ ಇಡಲು ಅವಳ ಸಹೋದರಿಗೆ ಹೇಳಿದರು.
 
ಆದ್ಯಳ ವಿಷಯದಲ್ಲಿ ಅವಳ ತಂದೆ-ತಾಯಿಗಳ ನಡುವೆ ಜಗಳ ಶುರುವಾಯಿತು. ಪ್ರತಿದಿನ ಆದ್ಯಳ ತಾಯಿ ಅಳುವುದು, ತಂದೆ ಕೋಪದಲ್ಲಿ ಬಯ್ಯುವುದು, ಮಗಳಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಹೆಚ್ಚಾಯಿತೆಂದು ಪೋಷಕರು ಪರಸ್ಪರ ದೂರುವುದು ದಿನನಿತ್ಯ ನಡೆಯುತ್ತಿತ್ತು. ಈ ವಿಷಯ ಕುರಿತು ಅಬ್ರಹಾಂ ಪೋಷಕರಲ್ಲಿ ಮಾತನಾಡಲು ಕೂಡ ಅವರಿಗೆ ಸಂಕೋಚ.

ಈ ಮಧ್ಯೆ ಆದ್ಯಳನ್ನು ಪೂರ್ವತಯಾರಿ ರಜೆಯಲ್ಲಿ ಓದಲೆಂದು ಅವಳ ಅತ್ತೆ ಮನೆ ತಿರುಪತಿಗೆ ಕಳುಹಿಸಿದರು. '' ನಾನು ಅಬ್ರಹಾಂ ಜೊತೆ ಕಷ್ಟದ ಪಾಠಗಳನ್ನು ಓದುತ್ತಿದೆ. ಪರಸ್ಪರ ವಿಷಯ ಚರ್ಚಿಸಿಕೊಳ್ಳುತ್ತಿದ್ದೆವು. ಯಾವಾಗ ಅಬ್ರಹಾಂನಿಂದ ದೂರವಾದೆನೋ ನನಗೆ ಓದಿನಲ್ಲಿ ನಿರಾಸಕ್ತಿ ಹುಟ್ಟಿಕೊಳ್ಳತೊಡಗಿತು. ಕಲಿತದ್ದು ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಅವನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅನಿಸತೊಡಗಿತು. ಪರೀಕ್ಷೆ ಹತ್ತಿರ ಬಂದಾಗ ನನ್ನ ಆತಂಕ ಇನ್ನಷ್ಟು ಹೆಚ್ಚಾಗುತ್ತಿತ್ತು''ಎನ್ನುತ್ತಾಳೆ ಆದ್ಯ.

ತನ್ನ ಅಸಹಾಯಕತೆಯನ್ನು ಯಾರ ಬಳಿಯೂ ಹೇಳಿಕೊಳ್ಳಲು ಆದ್ಯಳಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿದಿನ ಅವಳ ಪೋಷಕರು ಫೋನ್ ಮಾಡಿ, ಇವತ್ತೇನು ಓದಿದೆ, ಎಷ್ಟು ಸಿಲೆಬಸ್ ಓದಿ ಮುಗಿಸಿದೆ ಎಂದು ಕೇಳುತ್ತಿದ್ದರು. ಈ ಗೊಂದಲ, ಆತಂಕಗಳಿಗೆ ಕೊನೆ ಹಾಡಬೇಕೆಂದು ನಿರ್ಧರಿಸಿದ ಆದ್ಯ, ತಂದೆಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿ ನನಗೆ ಯಾವುದರಲ್ಲಿಯೂ ಆಸಕ್ತಿಯಿಲ್ಲ, ನನ್ನ ಜೀವನವನ್ನು ಕೊನೆ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದಳು. ತೀವ್ರ ನೊಂದುಹೋದ ಆದ್ಯಳ ತಂದೆ ಆಕೆಯ ಅತ್ತೆಗೆ ಫೋನ್ ಮಾಡಿದರು.
 
ಅತ್ತೆ ಮತ್ತು ಅವರ ಮಗಳು ಆದ್ಯಳನ್ನು ಪರಿಪರಿಯಾಗಿ ಮನವೊಲಿಸಲು ಪ್ರಯತ್ನಿಸಿದರು. ವಿನಾಕಾರಣಕ್ಕೆ ಜೀವವನ್ನು ಕಳೆದುಕೊಳ್ಳುವ ನಿರ್ಧಾರ ಮಾಡಬೇಡ, ದುಡುಕಬೇಡ ಎಂದು ಬುದ್ದಿಮಾತು ಹೇಳಿದರು.

ಮರುದಿನ ಆದ್ಯಳ ಪೋಷಕರು ತಿರುಪತಿಗೆ ತೆರಳಿದರು. ಅವರು ತಮ್ಮ ಮಗಳು ನಿಜವಾಗಿಯೂ ಆತ್ಮಹತ್ಯೆಗೆ ಯತ್ನಿಸುತ್ತಾಳೆ ಎಂದು ಭಾವಿಸಿದ್ದರು. ಆದರೆ ಆದ್ಯ, ತನ್ನ ತಂದೆ-ತಾಯಿ ಎಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಡಲು, ಅಬ್ರಹಾಂನಿಂದ ದೂರ ಮಾಡದಂತೆ ನೋಡಿಕೊಳ್ಳಲು ಆ ರೀತಿ ಮಾಡಿದ್ದಳು.
 
''ನಾನು ಆತ್ಮಹತ್ಯೆ ಮಾಡಿಕೊಳ್ಳಲು ಎಂದೂ ಯೋಚಿಸಿರಲಿಲ್ಲ. ನನ್ನ ತಂದೆ-ತಾಯಿಗೆ ನಾನು ಮತ್ತು ನನ್ನ ಸೋದರಿ ಎಷ್ಟು ಅಗತ್ಯ ಅನ್ನುವುದು ಗೊತ್ತು. ಆದರೆ ನನ್ನ ಮಾತುಗಳನ್ನು ಕೇಳಲು ಈ ರೀತಿ ಮಾಡುವುದು ನನಗೆ ಅನಿವಾರ್ಯವಾಗಿತ್ತು ಎನ್ನುತ್ತಾಳೆ ಆದ್ಯ.

ನಂತರ ಆದ್ಯಳನ್ನು ಪುನಃ ಪೋಷಕರು ಅಬ್ರಹಾಂ ಜೊತೆಗೆ ಅಧ್ಯಯನ ಮಾಡಲು ಬಿಟ್ಟರು. ಕೊನೆ ಪರೀಕ್ಷೆಯಲ್ಲಿ ಆದ್ಯ ಮೊದಲ ರ್ಯಾಂಕ್  ಬಂದರೆ ಅಬ್ರಹಾಂಗೆ ದ್ವಿತೀಯ ರ್ಯಾಂಕ್ ನಲ್ಲಿ ತೇರ್ಗಡೆ ಹೊಂದಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com