ಮಾ. 19ರಂದು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ: ನಡೆದಿದೆ ಸಕಲ ಸಿದ್ಧತೆ

ಮೇಲುಕೋಟೆ ಶ್ರೀ ಚೆಲುವ ನಾರಾಯಣಸ್ವಾಮಿ ವೈರಮುಡಿ ಕಿರೀಟ ಧಾರಣೆ ಮಹೋತ್ಸವ ಮಾ.19ರಂದು ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ...
ವೈರಮುಡಿ ಉತ್ಸವ
ವೈರಮುಡಿ ಉತ್ಸವ

ಮಂಡ್ಯ: ಮೇಲುಕೋಟೆ ಶ್ರೀ ಚೆಲುವ ನಾರಾಯಣಸ್ವಾಮಿ ವೈರಮುಡಿ ಕಿರೀಟ ಧಾರಣೆ ಮಹೋತ್ಸವ ಮಾ.19ರಂದು ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲಾ ಖಜಾನೆಯಲ್ಲಿ ವಜ್ರ ಖಚಿತ ವಾದ ವೈರಮುಡಿ-ರಾಜಮುಡಿ ಕಿರೀಟಗಳನ್ನು ಮೇಲುಕೋಟೆಗೆ ತಂದು ಜಿಲ್ಲಾಧಿಕಾರಿಗಳು ಮತ್ತು ಸ್ಥಾನಿಕರು, ಅರ್ಚಕರ ಸಮಕ್ಷಮ ಪರಿಶೀಲಿಸಿದ ನಂತರ ವೈರಮುಡಿ ಕಿರೀಟವನ್ನು ರಾತ್ರಿ 8 ಗಂಟೆಗೆ ಗರುಡಾರೂಢನಾದ ಚೆಲುವನಾರಾಯಣನಿಗೆ ತೊಡಿಸಲಾಗುತ್ತದೆ.

ಬೆಳಗಿನ 4 ಗಂಟೆಯವರೆಗೆ ಉತ್ಸವ ನೆರವೇರಿಸಲಾಗುತ್ತದೆ. ವೈರಮುಡಿ ಉತ್ಸವ ನಂತರ ರಾಜಮುಡಿ ಉತ್ಸವ ಸಹ ನೆರವೇರಲಿದೆ.

ವೈರಮುಡಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು  ಮಾ-26ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದ ಏಳನೇಯ ದಿನವಾದ ಮಾ.22ರ ಬೆಳಗ್ಗೆ ಮಹಾರಥೋತ್ಸವ  ಅದ್ದೂರಿಯಾಗಿ ನಡೆಯಲಿದೆ. ರಾತ್ರಿ  ರಾಮಾನುಜಾಚಾರ್ಯರ ಕಾಲದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಹರಿಜನರ ಬಂಗಾರದ ಪಲ್ಲಕ್ಕಿ ಉತ್ಸವ ನೆರವೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com