ವಿಟಿಯು ಉಪಕುಲಪತಿ ಡಾ. ಎಚ್ ಮಹೇಶಪ್ಪ ಅಮಾನತು

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಚ್ ಮಹೇಶಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಚ್ ಮಹೇಶಪ್ಪ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಚ್ ಮಹೇಶಪ್ಪ

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಚ್ ಮಹೇಶಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ರಾಜ್ಯಪಾಲ ಮತ್ತು ವಿಶ್ವವಿದ್ಯಾಲಯಗಳ ಕುಲಪತಿ ವಾಜು ಬಾಯಿ ವಾಲಾ ಮಂಗಳವಾರ ಬೆಳಗ್ಗೆ ಮಹೇಶಪ್ಪನವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ವಿಟಿಯುಗೆ ಫ್ಯಾಕ್ಸ್ ಮೂಲಕ ಕಳುಹಿಸಲಾಗಿದೆ.

ನ್ಯಾಯಮೂರ್ತಿ ಕೇಶವನಾರಾಯಣ ಮುಖ್ಯಸ್ಥರಾಗಿದ್ದ ನಿಜಾಂಶ ಪತ್ತೆ ಸಮಿತಿಯ ಶಿಫಾರಸ್ಸಿನ ಮೇಲೆ ರಾಜ್ಯಪಾಲರು ಉಪಕುಲಪತಿಗೆ ಜನವರಿ ೨೯ ರಂದು ನೋಟಿಸ್ ಜಾರಿ ಮಾಡಿದ್ದರು. ಒಂದು ತಿಂಗಳ ನಂತರ ಇದಕ್ಕೆ ಮಹೇಶಪ್ಪ ಉತ್ತರಿಸಿದ್ದರು. ಈ ಉತ್ತರ ಸಮಾಧನಕರವಾಗಿಲ್ಲ ಎಂದು ರಾಜ್ಯಪಾಲರು ಈ ಅಮಾನತ್ತಿನ ಆದೇಶ ಹೊರಡಿಸಿದ್ದಾರೆ.

ನೇಮಕಾತಿಗಳು, ಕಟ್ಟಡ ನಿರ್ಮಾಣ ಮತ್ತು ವಿಶ್ವದ್ಯಾಲಯದ ಠೇವಣಿಗಳಲ್ಲಿ ಅಧಿಕಾರ ದುರುಪಯೋಗ ಮಾಡಿ ಅಕ್ರಮವೆಸಗಿದ್ದಾರೆ ಎಂದು ಮಹೇಶಪ್ಪನವರ ವಿರುದ್ಧ ಸಮಿತಿ ಆರೋಪಪಟ್ಟಿ ಸಲ್ಲಿಸಿತ್ತು.

ಮೂರು ವರ್ಷಗಳ ಅವಧಿಗೆ ಜುಲೈ ೨೦೧೦ರಲ್ಲಿ ನೇಮಕವಾಗಿದ್ದ ಡಾ. ಮಹೇಶಪ್ಪನವರ ಅವಧಿಯನ್ನು ಜೂನ್ ೩೦ ೨೦೧೬ ರಂದು ವಿಸ್ತರಿಸಲಾಗಿತ್ತು.  

ಮುಂದಿನ ಆದೇಶದವರೆಗೆ ಹಂಗಾಮಿ ಉಪಕುಲಪತಿಗಲಾಗಿರುವಂತೆ ರಿಜಿಸ್ಟಾರ್ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.

ಪ್ರಸಕ್ತ ರಾಜ್ಯಪಾಲರು ಅಮಾನತುಗೊಳಿಸಿರುವ ಎರಡನೆ ಉಪಕುಲಪತಿ ಮಹೇಶಪ್ಪ. ಇದಕ್ಕೂ ಮೊದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ, ವಾಲಿಕರ್ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com