ಸೆಂಟ್ರಲ್ ಜೈಲಿನಿಂದ 4 ವಿಚಾರಣಾಧೀನ ಕೈದಿಗಳು ಎಸ್ಕೇಪ್

ಕಲಬುರಗಿ ಸೆಂಟ್ರಲ್ ಜೈಲಿನಿಂದ ನಾಲ್ಕು ಜನ ವಿಚಾರಣಾಧೀನ ಕೈದಿಗಳು ಪರಾರಿಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ...
ಕಲಬುರಗಿ ಸೆಂಟ್ರಲ್ ಜೈಲ್
ಕಲಬುರಗಿ ಸೆಂಟ್ರಲ್ ಜೈಲ್
Updated on

ಕಲಬುರಗಿ:  ಕಲಬುರಗಿ ಸೆಂಟ್ರಲ್ ಜೈಲಿನಿಂದ ನಾಲ್ಕು ಜನ ವಿಚಾರಣಾಧೀನ ಕೈದಿಗಳು ಪರಾರಿಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ಶಿವಕುಮಾರ್, ಸುನೀಲಕುಮಾರ್, ತಾಜುದ್ದೀನ್, ಲಕ್ಷ್ಮಣ ಎಂಬ ಕೈದಿಗಳು ಜೈಲಿನ ಬ್ಯಾರಕ್‌ನ ಗೋಡೆ ಕೊರೆದು ನಂತರ ಜೈಲಿನ ಗೋಡೆ ಹಾರಿ ಕೈದಿಗಳು ಪರಾರಿಯಾಗಿದ್ದಾರೆ.

ಇವರರಲ್ಲಿ ಓರ್ವ ಕೊಲೆ ಅಪರಾಧಿ ಹಾಗೂ ಉಳಿದ ಮೂರು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು ಎನ್ನಲಾಗಿದೆ. ಪರಾರಿಯಾದ ಕೈದಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ಪ್ರಕರಣದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ, ಕೈದಿಗಳು ಪರಾರಿಯಾಗಲು ಅಲ್ಲಿದ್ದ ಸಹ ಕೈದಿಗಳು ಸಹಾಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಮಧ್ಯರಾತ್ರಿ 1 ಗಂಟೆಯಿಂದ 3ಗಂಟೆಯ ಒಳಗೆ ಪರಾರಿಯಾಗಿದ್ದು, ತಡವಾಗಿ ಪೊಲೀಸರ ಗಮನಕ್ಕೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com