ಎಲ್ ಇಡಿ ಬಲ್ಬುಗಳಿಂದ ಯಾವುದೇ ಹಾನಿಯಿಲ್ಲ: ಡಿಕೆಶಿ

ಎಲ್ ಇಡಿ ಬಲ್ಬು ಬಳಸುವುದರಿಂದ ಕಣ್ಣಿಗೆ ಯಾವುದೇ ರೀತಿಯ ಹಾನಿಯಿಲ್ಲ ಎಂದು ಇಂಧನ ಸಚಿವ...
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಬೆಂಗಳೂರು: ಎಲ್ ಇಡಿ ಬಲ್ಬು ಬಳಸುವುದರಿಂದ ಕಣ್ಣಿಗೆ ಯಾವುದೇ ರೀತಿಯ ಹಾನಿಯಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಿನ್ನೆ ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯೆ ವಿಮಲಾ ಗೌಡ, ಎಲ್ ಇಡಿ ಬಲ್ಬ್ ನಿಂದ ಕಣ್ಣಿನ ರೆಟಿನಾದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂದು ನೇತ್ರಶಾಸ್ತ್ರ ಸೊಸೈಟಿಯೊಂದು ವಿಷಯವೆತ್ತಿದೆ. ಬಲ್ಬ್ ನಲ್ಲಿ ಉಪಯೋಗಿಸುವ ರಾಸಾಯನಿಕಗಳು ಶರೀರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ ಎಂದರು.

ಅದಕ್ಕೆ ಉತ್ತರಿಸಿದ ಸಚಿವರು, ಎಲ್ ಇಡಿ ಬಲ್ಬ್ ಗಳನ್ನು ಉಪಯೋಗಿಸುವುದರಿಂದ ನಾವು ಶೇಕಡಾ 40ರಷ್ಟು ವಿದ್ಯುತ್ ನ್ನು ಉಳಿತಾಯ ಮಾಡಬಹುದು. ಹೊಸ ಬೆಳಕು ಯೋಜನೆಯಡಿ, ರಾಜ್ಯ ಸರ್ಕಾರ 6.5 ಕೋಟಿ ಬಲ್ಬ್ ಗಳಿಗೆ ಟೆಂಡರ್ ಕರೆದಿದೆ. ಅವುಗಳಲ್ಲಿ 2 ಕೋಟಿ ಸ್ಥಳೀಯ ಉತ್ಪಾದಕರಿಂದ ಪೂರೈಕೆಯಾಗಿದೆ. ಆದರೆ ಕೆಲವು ಉತ್ಪಾದಕರು ರಾಜ್ಯ ಸರ್ಕಾರ ನಿಗದಿಪಡಿಸಿರುವ ಸಬ್ಸಿಡಿ ದರ ಕಡಿಮೆಯಾಗಿದೆ ಎನ್ನುತ್ತಿದ್ದಾರೆ. ಅಂತವರು ಇಂತಹ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ. ಎಲ್ ಇಡಿ ಬಲ್ಬ್ ಗಳನ್ನು ಬಳಸುವುದರಿಂದ ಯಾವುದೇ ರೀತಿಯಲ್ಲಿ ತೊಂದರೆಯಿಲ್ಲ ಎಂದು ಅವರು ಸಂದೇಹಗಳಿಗೆ ತೆರೆ ಎಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com