ಮೇ ತಿಂಗಳವರೆಗೂ ಕುಡಿವ ನೀರಿನ ಸಮಸ್ಯೆಯಿಲ್ಲ: ಬಿಡಬ್ಲ್ಯೂ ಎಸ್ ಎಸ್ ಬಿ

ಮೇ ತಿಂಗಳವರೆಗೂ ಪೂರೈಸುವಷ್ಟು ಅಗತ್ಯವಾದ ನೀರಿದ್ದು, ಅಲ್ಲಿಯವರೆಗೂ ಕುಡಿವ ನೀರಿನ ಸಮಸ್ಯೆ ಇಲ್ಲ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷ ಟಿಎಂ ವಿಜಯ ಭಾಸ್ಕರ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮೇ ತಿಂಗಳವರೆಗೂ ಪೂರೈಸುವಷ್ಟು ಅಗತ್ಯವಾದ ನೀರಿದ್ದು, ಅಲ್ಲಿಯವರೆಗೂ ಕುಡಿವ ನೀರಿನ ಸಮಸ್ಯೆ ಇಲ್ಲ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷ ಟಿಎಂ ವಿಜಯ ಭಾಸ್ಕರ್ ಹೇಳಿದ್ದಾರೆ.

ವಿಶ್ವಜಲದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ದಿನ ಪ್ರತಿ ವ್ಯಕ್ತಿಗೆ ಜಲಮಂಡಳಿ 135 ಲೀಟರ್ ನೀರನ್ನು ಪೂರೈಸಲು ಶಕ್ತವಿದೆ. ಆದರೆ ಹಲವು ಕಾರಣಗಳಿಂದಾಗಿ ಕೇವಲ 70 ಲೀ. ನೀರು ಮಾತ್ರ ಪೂರೈಕೆಯಾಗುತ್ತಿದೆ. ಉಳಿದ 65 ಲೀಟರ್ ನೀರು ಸೋರಿಕೆಯಿಂದ ಹಾಗೂ ಕಳ್ಳತನದಿಂದ ವ್ಯರ್ಥವಾಗುತ್ತಿದೆ ಎಂದು ಹೇಳಿದ್ದಾರೆ.

ಕೆಲ ಪ್ರದೇಶಗಳಲ್ಲಿ ಹೊಲಸು ಮತ್ತು ಕಸ, ಕುಡಿಯುವ ನೀರಿಗೆ ಮಿಶ್ರಣವಾಗುತ್ತಿದ್ದೂ, ಅಂಥ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥ ಪಡಿಸಬೇಕು ಎಂದು ವಿಜಯ್ ಭಾಸ್ಕರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರತಿದಿನ ಕನಿಷ್ಠ ನೂರು ನೀರಿನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸುತ್ತಿದ್ದು, ಕ್ಲೋರಿನ್ ಪ್ರಮಾಣ ಕಡಿಮೆ ಇರುವ ಕಡೆ ಅದನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

ಇನ್ನೂ ನಗರ ಪ್ರದೇಶದ ಮನೆಗಳಿಗೆ ವಾಟರ್ ಮೀಟರ್ ಅಳವಡಿಸುವಲ್ಲಿ ಜಲಮಂಡಳಿ ಶೇ.98 ರಷ್ಟು ಯಶಸ್ವಿಯಾಗಿದೆ. 1.5 ಲಕ್ಷ ಹಳೇಯ ಮೀಟರ್ ಗಳ ಬದಲಾಗಿ ಹೊಸ ಮೀಟರ್ ಅಳವಡಿಸಿದ್ದೇವೆ, ಜೊತೆಗೆ ಅಕ್ರಮ ಸಂಪರ್ಕಗಳನ್ನು ರದ್ದುಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com