ಹಂಪಿಗೆ ಪ್ರವಾಸ ಹೋಗುವವರನ್ನು ಸ್ವಾಗತಿಸಲಿವೆ ವಿಜಯನಗರ ಕಾಲದ ಶೈಲಿಯ ಮನೆಗಳು!

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಗೆ ಪ್ರವಾಸ ಹೋಗುವವರನ್ನು, ವಿಜಯನಗರ ಸಾಮ್ರಾಜ್ಯ ಕಾಲದ ಶೈಲಿಯಲ್ಲಿ ನಿರ್ಮಿಸಲಾದ ಮನೆಗಳು( ಹೋಂ ಸ್ಟೇ) ಸ್ವಾಗತಿಸಲಿವೆ.

ಕಿಷ್ಕಿಂದ ಟ್ರಸ್ಟ್ ವಿಜಯನಗರದಲ್ಲಿರುವ 15 ನೇ ಶತಮಾನದ ಮನೆಗಳನ್ನು ಅದೇ ಶೈಲಿಯಲ್ಲಿ ಪುನರುಜ್ಜೀವನಗೊಳಿಸಿ  ಪ್ರವಾಸಿಗರಿಗೆ ಬಾಡಿಗೆ ನೀಡುವ ವ್ಯವಸ್ಥೆ ಮಾಡುತ್ತಿದೆ. ಈಗಾಗಲೇ 6 ಪುರಾತನ ಮನೆಗಳನ್ನು ಪುನರುಜ್ಜೀವನಗೊಳಿಸಲಾಗಿದ್ದು, ಪ್ರವಾಸಿಗರ ಬಳಕೆಗೆ ಸಿದ್ಧವಿದೆ.

ಹಂಪಿ- ಆನೆಗೊಂದಿಯಲ್ಲಿರುವ 15 -16 ನೇ ಶತಮಾನದ ಮನೆಗಳನ್ನು ಪತ್ತೆ ಮಾಡಿ ಪುನರುಜ್ಜೀವನಗೊಳಿಸುವ ಈ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು ಆದರೆ ಈಗ ಜಾರಿಯಾಗುತ್ತಿದೆ.  

ಪುರಾತನ ಮನೆಗಳ ಮಾಲೀಕರು ಪಾರಂಪರಿಕ ಕಟ್ಟಡಗಳಿಂದ ದೂರ ವಾಸ ಮಾಡುತ್ತಿದ್ದಾರೆ. ಕಿಷ್ಕಿಂದ ಟ್ರಸ್ಟ್ ಹಾಗೂ ಮನೆಗಳ  ಮಾಲಿಕರ ಒಪ್ಪಂದದ ಪ್ರಕಾರ, ಪುರಾತನ ಮನೆಗಳನ್ನು 15 ಶತಮಾನದ ಶೈಲಿಯಲ್ಲೇ ಅಭಿವೃದ್ಧಿ ಪಡಿಸಿ ಪ್ರವಾಸಿಗರಿಗೆ ಬಾಡಿಗೆ ನೀಡುವವರಿಂದ ಮನೆಗಳ ಮಾಲಿಕರು ಬಾಡಿಗೆ ಪಡೆಯುತ್ತಾರೆ ಹಾಗೂ 5 ವರ್ಷಗಳ ನಂತರ ಮನೆಯನ್ನು ಮಾಲಿಕರಿಗೆ ಬಿಟ್ಟುಕೊಡಲಾಗುತ್ತದೆ. ನಂತರ ಒಪ್ಪಂದವನ್ನು ಮುಂದುವರೆಸುವುದು ಬಿಡುವುದು ಮನೆಗಳ ಮಾಲಿಕರ ಆಯ್ಕೆಯಾಗಿರುತ್ತದೆ.

ಈ ವರ್ಷ ಆರು ಮನೆಗಳು ಪ್ರವಾಸಿಗರ ಬಳಕೆಗೆ ಸಿದ್ಧವಾಗಿದೆ ಮುಂದಿನ ವರ್ಷ ಕನಿಷ್ಠ 12 ಮನೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಕಿಷ್ಕಿಂದ ಟ್ರಸ್ಟ್  ನ ಶಮಾ ಪವಾರ್ ತಿಳಿಸಿದ್ದಾರೆ. ಹೊಟೆಲ್ ಗಳಿಗಿಂತ ಇಂತಹ ಪುರಾತನ ಮನೆಗಳು ಪ್ರವಾಸಿಗರನ್ನು ಸೆಳೆಯಲಿದೆ ಎಂಬುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವಿಶ್ವಾಸವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com