ಪಿಯು ಮಂಡಳಿ ನಿರ್ದೇಶಕಿಯೇ ನೇರ ಹೊಣೆ: ಕಿಮ್ಮನೆ ರತ್ನಾಕರ

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ...
ಸಚಿವ ಕಿಮ್ಮನೆ ರತ್ನಾಕರ
ಸಚಿವ ಕಿಮ್ಮನೆ ರತ್ನಾಕರ

ಬೆಂಗಳೂರು: ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪಿಯು ಮಂಡಳಿ ನಿರ್ದೇಶಕಿಯೇ ಇದಕ್ಕೆ ನೇರ ಹೊಣೆ. ಮಂಡಳಿಯ ವಿಫಲತೆಯೇ ಇದಕ್ಕೆ ಕಾರಣ, ಬೇರೆ ಯಾರೂ ಅಲ್ಲ ಎಂದು ಆಪಾದಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಒಂದು ದೊಡ್ಡ ಅನಾಹುತ. ಇದು ನಡೆಯಬಾರದಿತ್ತು. ಇದರ ನೈತಿಕ ಹೊಣೆಯನ್ನು ನಾನು ಹೊರುತ್ತೇನೆ. ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಯಾರದ್ದೋ ಕೈವಾಡವಿದೆ ಅವರು ಹೇಳಿದ್ದಾರೆ.

ಮಾಹಿತಿ ಪಡೆದ ಸಿಎಂ: ಇಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ಮುಂದೂಡಿದ ಹಿನ್ನೆಲೆಯಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಕರೆ ಮುಖ್ಯಮಂತ್ರಿ ಕರೆ ಮಾಡಿ ಮಾಹಿತಿ ಪಡೆದರು.ಪ್ರಕರಣ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಈ ಮಧ್ಯೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಪಿಯು ಬೋರ್ಡ್ ನಿರ್ದೇಶಕಿ ಪಲ್ಲವಿ ಆಕುರಾತಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಮುಂದೂಡಲಾಗಿದೆ ಎಂದು ಪೊಲೀಸರಿಂದ ಇಂದು ಬೆಳಗ್ಗೆ ಮಾಹಿತಿ ಪಡೆದೆನು. ಸಂಬಂಧಪಟ್ಟ ಅಧಿಕಾರಿಗಳಿಗೆ, ಜಿಲ್ಲೆಗಳಿಗೆ ಕೂಡಲೇ ವಿಷಯ ತಲುಪಿಸಲಾಯಿತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com