
ತುಮಕೂರು: ತುಮಕೂರು ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಯ ಹೋರಾಟದ ಬದುಕು ಕೊನೆಯಾಗಿದೆ. ನಷ್ಟದಲ್ಲಿದ್ದ ಕಾರ್ಖಾನೆಗೆ ಶನಿವಾರ ಅಧಿಕೃತವಾಗಿ ಬೀಗ ಹಾಕಲಾಯಿತು.
ಕಾರ್ಮಿಕರ ದಿನಾಚರಣೆಯ ಮುನ್ನಾದಿನ 125 ಕಾರ್ಮಿಕರಿಗೆ ಬಿಡುಗಡೆ ಪತ್ರ ನೀಡಲಾಯಿತು.
1978 ರಲ್ಲಿ ಮಾಜಿ ಸಂಸದ ಕೆ. ಲಕ್ಕಪ್ಪ ತುಮಕೂರಿನಲ್ಲಿ ಎಚ್ .ಎಂ ಟಿ ಘಟಕ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 119 ಎಕರೆಯಲ್ಲಿದ್ದ ಎಚ್ ಎಂಟಿಯ 20 ಘಟಕಗಳಲ್ಲಿ 1.600 ಸಿಬ್ಬಂದಿ ಕೆಲಸ ಮಾಡುತ್ತಿದ್ದರು.
ಇನ್ನು ಸಿದ್ದಗಂಗ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಕೆಐಎಡಿಬಿ ಗೆ 40 ಎಕರೆ ಭೂಮಿಯನ್ನು ಸ್ವಯಂ ಪ್ರೇರಿತವಾಗಿ ಈ ಕಾರ್ಖಾನೆಗೆ ನೀಡಿದ್ದರು.
ಇನ್ನು ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉನ್ನತ ಅಧಿಕಾರಿಗಳು ಹೊಸೂರಿನಲ್ಲಿರುವ ಖಾಸಗಿ ಕಂಪನಿಯ ನೌಕರಿಗೆ ಸೇರಿಕೊಂಡಿದ್ದಾರೆ. ಪೂರಕ ಘಟಕಗಳಲ್ಲಿ ಕೆಲಸ ನಿರ್ವಹಿಸುವ ಕೆಲ ಸಿಬ್ಬಂದಿ ಈಗಾಗಲೇ ವಾಚ್ ಬಿಡಿಭಾಗಗಳ ಅಕ್ರಮ ಮಾರಾಟದಲ್ಲಿ ತೊಡಗಿದ್ದಾರೆ ಎಂದು ತುಮಕೂರು ಎಚ್ ಎಂಟಿ ಕಾರ್ಖಾನೆ ಪಿಆರ್ ಆಗಿದ್ದ ಒ ಕೆ.ಎನ್ ಶಿವರಾಜ್ ಹೇಳಿದ್ದಾರೆ.
2006 ನೇ ಇಸವಿಯಲ್ಲಿ ತುಮಕೂರು ಘಟಕದ ಆಡಳಿತ ಮಂಡಳಿ ಕಾರ್ಖಾನೆಯನ್ನು ಪುನರುಜ್ಜೀವನ ಗೊಳಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಮುಂದಿನ ಹತ್ತು ದಿನದಲ್ಲಿ ಕಾರ್ಮಿಕರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ. ಕನಿಷ್ಠ 25 ರಿಂದ 30 ಲಕ್ಷ ಸಿಗಬಹುದು ಎಂಬುದು ಕಾರ್ಮಿಕರ ಲೆಕ್ಕಾಚಾರ. ಕಣ್ಣೀರು ಒರೆಸಿಕೊಳ್ಳುತ್ತಾ, ಭಾರವಾದ ಹೃದಯ ಹೊತ್ತು ಫ್ಯಾಕ್ಟರಿಯಿಂದ ಈಚೆ ನಡೆದರು.
Advertisement