ಕಸ ಮುಕ್ತ ಬೆಂಗಳೂರಿಗಾಗಿ ಶ್ರಮಿಸುತ್ತಿರುವ ಸುಫಿಯಾನ್

ಕಳೆದ ಕೆಲ ವರ್ಷಗಳಿಂದ ನಗರಕ್ಕೆ ಸಿಕ್ಕಿರುವ 'ಕಸದ ನಗರ' ಎಂಬ ಕೆಟ್ಟ ಬಿರುದನ್ನು ತೆಗೆದು ಹಾಕಲು 45 ವರ್ಷದ ಉದ್ಯಮಿ...
ನಗರದಲ್ಲಿ ತಮ್ಮ ತಂಡದವರ ಜತೆ ಕಸ ಎತ್ತುವುದರಲ್ಲಿ ತೊಡಗಿರುವ ಸುಫಿಯನ್(ಬಲ ಕಡೆಯಲ್ಲಿರುವವರು)
ನಗರದಲ್ಲಿ ತಮ್ಮ ತಂಡದವರ ಜತೆ ಕಸ ಎತ್ತುವುದರಲ್ಲಿ ತೊಡಗಿರುವ ಸುಫಿಯನ್(ಬಲ ಕಡೆಯಲ್ಲಿರುವವರು)

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ನಗರಕ್ಕೆ ಸಿಕ್ಕಿರುವ 'ಕಸದ ನಗರ' ಎಂಬ ಕೆಟ್ಟ ಬಿರುದನ್ನು ತೆಗೆದು ಹಾಕಲು 45 ವರ್ಷದ ಉದ್ಯಮಿ ಎಂ.ಎಸ್. ಸುಫಿಯಾನ್ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.

ಅವರೊಂದು ವಾಟ್ಸಾಪ್ ಗುಂಪನ್ನು ರಚಿಸಿಕೊಂಡಿದ್ದಾರೆ. ಆ ಮೂಲಕ ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ. ತಾವು ವಾಸಿಸುವ ಯೂನಿಯನ್ ಸ್ಟ್ರೀಟ್ ನ ಸುತ್ತಮುತ್ತ ಮನೆ ಮನೆಗೆ ಹೋಗಿ ನಿವಾಸಿಗಳನ್ನು, ಪೌರ ಕಾರ್ಮಿಕರನ್ನು ಮತ್ತು ನಗರ ಪಾಲಿಕೆ ಅಧಿಕಾರಿಗಳನ್ನು ಒಟ್ಟು ಸೇರಿಸಿ ತಮ್ಮ ಕೆಲಸಕ್ಕೆ ಕೈ ಜೋಡಿಸುವಂತೆ ಕೋರುತ್ತಾರೆ.

ಸುಫಿಯಾನ್ ಅವರ ದಿನಚರಿ ಆರಂಭವಾಗುವುದು ಬೆಳಗ್ಗೆ 6.30ಕ್ಕೆ. ಪ್ರತಿನಿತ್ಯ ಬೆಳಗ್ಗೆ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ನಗರದ ರಸ್ತೆಗಳಲ್ಲಿ ಹೋಗುತ್ತಾರೆ. ಎಲ್ಲೆಲ್ಲ ಕಸದ ರಾಶಿ ಕಾಣುತ್ತದೆಯೋ ಅಲ್ಲೆಲ್ಲ ಅವುಗಳನ್ನು ಒಂದೋ ಸುಡುತ್ತಾರೆ ಇಲ್ಲವೇ ಒಂದೆಡೆ ರಾಶಿ ಹಾಕಿ ಫೋಟೋ ಕ್ಲಿಕ್ಕಿಸಿ ವಾಟ್ಸಾಪ್ ಗುಂಪಿನಲ್ಲಿ ಹಾಕುತ್ತಾರೆ.

ಇವರು ಸಕ್ರಿಯ ನಿವಾಸಿಗಳ ಅಭಿವೃದ್ಧಿ ಸಂಸ್ಥೆಯ ಸದಸ್ಯರಾಗಿದ್ದು, ಅದು ನಗರದ ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ. ಇದಕ್ಕಾಗಿ ಪೌರ ಕಾರ್ಮಿಕರನ್ನು ಸೇರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com