ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಮುಖ ಕಡತಗಳೇ ನಾಪತ್ತೆ!

ಆದರೆ ಈಗ ಮತ್ತೊಂದು ಆಘಾತಕಾರಿ ವಿಷಯವೆಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲ ನಿರ್ಣಾಯಕ ಕಡತಗಳೇ ನಾಪತ್ತೆಯಾಗಿವೆ. ...
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಶೀಘ್ರವೇ ಮತ್ತೊಂದು ಹಗರಣದಲ್ಲಿ ಸಿಲುಕುವ ಸಾಧ್ಯತೆಯಿದೆ. ನೀರಿನ ಶುದ್ದತೆ ಪರೀಕ್ಷೆ ಮಾಡುವ ಪ್ರಯೋಗಾಲಯ ಸ್ಥಾಪನೆ ಸಂಬಂಧ ನೂರಾರು ಕೋಟಿ ವಂಚನೆ ನಡೆದಿತ್ತು. 

ಆದರೆ ಈಗ ಮತ್ತೊಂದು ಆಘಾತಕಾರಿ ವಿಷಯವೆಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲ ನಿರ್ಣಾಯಕ ಕಡತಗಳೇ ನಾಪತ್ತೆಯಾಗಿವೆ.

ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದ ಕಡತದ ಜೊತೆಗೆ ಸುಮಾರು 40 ಫೈಲ್ ಗಳು ನಾಪತ್ತೆಯಾಗಿವೆ. ಇನ್ನೂ ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್ .ಕೆ ಪಾಟೀಲ್ ಇಲಾಖಾ ಕಾರ್ಯದರ್ಶಿಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಒಂದು ವೇಳೆ ಇಲಾಖಾ ಕಾರ್ಯದರ್ಶಿ ತನಿಖೆ ನಡೆಸಿ ಕಡತಗಳನ್ನು ಕಳ್ಳತನ ಮಾಡಿರುವ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ವಿಫಲವಾದರೇ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಸಚಿವರ ಆದೇಶದ ಮೇರೆಗೆ ಇಲಾಖಾ ವತಿಯಿಂದ ತನಿಖೆ ನಡೆಸುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com