ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಾಪತ್ತೆಯಾಗಿದ್ದ 30 ಕಡತ ಪತ್ತೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಾಪ್ತತೆಯಾಗಿದ್ದ 40 ಕಡತಗಳ ಪೈಕಿ 30 ಕಡತಗಳು ಪತ್ತೆಯಾಗಿದೆ.
ಎಚ್ ಕೆ ಪಾಟೀಲ್
ಎಚ್ ಕೆ ಪಾಟೀಲ್
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಾಪ್ತತೆಯಾಗಿದ್ದ 40 ಕಡತಗಳ ಪೈಕಿ 30 ಕಡತಗಳು ಪತ್ತೆಯಾಗಿದೆ. 
ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಅವರು ಸಚಿವ ಎಚ್ ಕೆ ಪಾಟೀಲ ಅವರಿಗೆ ಗುರುವಾರ ಮಧ್ಯಂತರ ವರದಿ ಸಲ್ಲಿಸಿದ್ದು, ಇನ್ನೂ 10 ಕಡತಗಳು ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. 
ಮೂರು ಪುಟಗಳ ಮಧ್ಯಮಂತರ ವರದಿ ಸಲ್ಲಿಸಿರುವ ಸುಭಾಷ್ ಚಂದ್ರ, ನಾಪತ್ತೆಯಾಗಿದ್ದ 40 ಕಡತಗಳ ಪೈಕಿ 30 ದೊರಕಿದ್ದು, ಇನ್ನು 10 ಕಡತಗಳು ಪತ್ತೆಯಾಗಿಲ್ಲ. ಹಾಗಾಗಿ, ನಾಪತ್ತೆಯಾಗಿರುವ ಕಡತಗಳು ಯಾವುವು? ಯಾವ ಕಾರಣಕ್ಕೆ ನಾಪತ್ತೆಯಾಗಿವೆ? ಯಾವ ಅಧಿಕಾರಿಗಳು ಕಾರಣರು ಎಂಬ ಎಲ್ಲ ಅಂಶಗಳ ಕುರಿತು ತನಿಖೆ ನೆಡಸಿ ವರದಿ ನೀಡಲು ಎರಡು ದಿನಗಳ ಕಾಲಾವಕಾಶ ನೀಡಬೇಕು ಎಂದು ಸಚಿವರನ್ನು ವಿನಂತಿಸಿಕೊಂಡಿದ್ದಾರೆ. 
ಕಡತಗಳು ನಾಪತ್ತೆಯಾಗಿರುವುದರ ಬಗ್ಗೆ ತನಿಖೆ ನಡಸಿ ವರದಿ ಸಲ್ಲಿಸಬೇಕು ಎಂದು ಮೇ 5ರಂದು ಸಚಿವರು ಸುಭಾಷ್ ಚಂದ್ರ ಅವರಿಗೆ ಸೂಚಿಸಿದ್ದರು. ಆದರೆ, ಒಂದು ವಾರ ಕಳೆದರೂ ಕಾರ್ಯದರ್ಶಿಗಳಿಂದ ಯಾವುದೇ ವರದಿ ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಸಚಿವರು ಮತ್ತೆ ಸುಭಾಷ್ ಚಂದ್ರ ಅವರಿಗೆ ಗುರುವಾರ ಪತ್ರ ಬರೆದು ಸಂಜೆಯೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಸುಭಾಷ್ ಚಂದ್ರ ಮಧ್ಯಂತರ ವರದಿ ಸಲ್ಲಿಸಿದ್ದು, ಹೆಚ್ಚಿನ ತನಿಖೆ ನಡೆಸಲು ಕಾಲಾವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com