ಎಂಆರ್ ಪಿಎಲ್ ಗೆ ಕೃಷಿ ಭೂಮಿ ಮಂಜೂರು: ಪೇಜಾವರ ಶ್ರೀಗಳಿಂದ ತೀವ್ರ ವಿರೋಧ

ಎಂ ಆರ್ ಪಿಎಲ್ ನ ನಾಲ್ಕನೇ ಹಂತದ ವಿಸ್ತರಣೆಗಾಗಿ ರಾಜ್ಯ ಸರ್ಕಾರ 3 ,000 ಎಕರೆಯಷ್ಟು ಭೂಮಿ ನೀಡುವುದಲು ಮುಂದಾಗಿರುವುದನ್ನು ವಿಶ್ವೇಶ ತೀರ್ಥ ಸ್ವಾಮಿಗಳು ವಿರೋಧಿಸಿದ್ದಾರೆ.
ಪೇಜಾವರ ಶ್ರೀ
ಪೇಜಾವರ ಶ್ರೀ

ಉಡುಪಿ: ಮಂಗಳೂರಿನಲ್ಲಿ ಎಂ ಆರ್ ಪಿಎಲ್ ನ ನಾಲ್ಕನೇ ಹಂತದ ವಿಸ್ತರಣೆಗಾಗಿ ರಾಜ್ಯ ಸರ್ಕಾರ 3 ,000 ಎಕರೆಯಷ್ಟು ಭೂಮಿ ನೀಡುವುದಲು ಮುಂದಾಗಿರುವುದನ್ನು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಗಳು ವಿರೋಧಿಸಿದ್ದಾರೆ.
ಪೇಜಾವರದ ಶ್ರೀ ಕೃಷ್ಣಾ ಮಠದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪೇಜಾವರ ಸ್ವಾಮೀಜಿ, " ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಎಂಆರ್ ಪಿಎಲ್ ( ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್) ನ ವಿಸ್ತರಣೆಗಾಗಿ  3 ಸಾವಿರ ಎಕರೆಯಷ್ಟು ಕೃಷಿ ಭೂಮಿಯನ್ನು ಮಂಜೂರು ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ತಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ. 
ರಾಜ್ಯ ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು. ಕಳೆದ ಎರಡು ವರ್ಷಗಳ ಹಿಂದೆಯೂ ಎಂಆರ್ ಪಿಎಲ್ ನ ವಿಸ್ತರಣೆಗಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಆಗಲೂ ವಿರೋಧ ವ್ಯಕ್ತಪಡಿಸಿದ್ದಾಗಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com