ದಕ್ಷಿಣ ಕನ್ನಡದ ದೇವಾಲಯಗಳಲ್ಲಿ ಸಾಂಪ್ರದಾಯಿಕ ಶೈಲಿಯ ನವೀಕರಣ

ದಕ್ಷಿಣ ಕನ್ನಡದ ಪುರಾತನ ದೇವಾಲಯಗಳನ್ನು ಪುರಾತತ್ವ ಇಲಾಖೆ ಸಾಂಪ್ರದಾಯಿಕ ಶೈಲಿಯಲ್ಲೇ ನವೀಕರಣ ಮಾಡಲು ಮುಂದಾಗಿದೆ.
ದಕ್ಷಿಣ ಕನ್ನಡದ ದೇವಾಲಯಗಳಲ್ಲಿ ಸಾಂಪ್ರದಾಯಿಕ ಶೈಲಿಯ ನವೀಕರಣ

ಮಂಗಳೂರು: ದಕ್ಷಿಣ ಕನ್ನಡದ ಪುರಾತನ ದೇವಾಲಯಗಳನ್ನು ಪುರಾತತ್ವ ಇಲಾಖೆ ಸಾಂಪ್ರದಾಯಿಕ ಶೈಲಿಯಲ್ಲೇ ನವೀಕರಣ ಮಾಡಲು ಮುಂದಾಗಿದೆ. ಜಿಲ್ಲೆಯ ಬಹುತೇಕ ದೇವಾಲಯಗಳು ನವೀಕರಣಗೊಳ್ಳಬೇಕಿದ್ದು, ಕಾಮಗಾರಿಗಳಿಗೆ ಸಾಂಪ್ರದಾಯಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ.

ಶೈವ-ವೈಷ್ಣವ ಪಂಥದ ಹಲವು ದೇವಾಲಯಗಳು ನವೀಕರಣ ಕಾಮಗಾರಿಗೆ ಸಿದ್ಧಗೊಂಡಿವೆಯಾದರೂ ಪುತ್ತೂರು ಮಹಲಿಂಗೇಶ್ವರ ದೇವಾಲಯ, ವಿಠಲ ಪಂಚಲಿಂಗೇಶ್ವರ ದೇವಾಲಯ, ಕಾರ್ಕಳದಲ್ಲಿ ವೆಂಕಟರಮಣ ದೇವಾಲಯ,  ಸೂರ್ಯ ನಾರಾಯಣ ದೇವಾಲಯಗಳನ್ನು ಅಪ್ಪಟ ಸಾಂಪ್ರದಾಯಿಕ ಶೈಲಿಯಲ್ಲೇ ಮರುನಿರ್ಮಾಣ ಮಾಡಲಾಗುತ್ತಿದ್ದು, ಕೆಂಪು ಲ್ಯಾಟರೈಟ್ ಕಲ್ಲು, ಮಣ್ಣಿನಿಂದ ಮಾಡಲಾದ  ಮೇಲ್ಚಾವಣಿಯ ಟೈಲ್ಸ್, ಬೀಟೆ, ತೇಗದ ಮರದ ಕಂಬಗಳನ್ನು ಬಳಸಿ ದೇವಾಲಯಗಳನ್ನು ನವೀಕರಣ ಮಾಡಲಾಗಿತ್ತುದೆ. ಇದರೊಂದಿಗೆ ಗ್ರಾನೈಟ್ ಫ್ಲೋರಿಂಗ್ ಸಹ ಮಾಡಲಾಗುತ್ತಿದೆ.

ದೇವಾಲಯದ ನವೀಕರಣ ಕಾಮಗಾರಿಯಲ್ಲಿ ಗೋಡೆ ನಿರ್ಮಿಸುವುದಕ್ಕೆ ಸಿಮೆಂಟ್ ಬದಲು ಲ್ಯಾಟರೈಟ್ ಕಲ್ಲುಗಳನ್ನು ಬಳಕೆ ಮಾಡಲಾಗುತ್ತಿದೆ. ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿ ನಿರ್ಮಿಸಲಾಗಿರುವುದು ದಕ್ಷಿಣ ಕನ್ನಡದ ವಿಷೆಶತೆಯಾಗಿದ್ದು ತುಳುವ ಶೈಲಿಯಲ್ಲಿ ಬಹುತೇಕ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ.   
ತುಳುವ ಶೈಲಿಯ ದೇವಾಲಯಗಳು ಪಶ್ಚಿಮ ಕರಾವಳಿ ಹಾಗೂ ಕೇರಳದ ಉತ್ತರ ಭಾಗದಲ್ಲಿ ಹೆಚ್ಚು ಕಾಣಸಿಗುತ್ತವೆ. ಹೆಚ್ಚು ಬಿಸಿಲು ಹಾಗೂ ಹೆಚ್ಚು ಮಳೆ ಇರುವ ಪ್ರದೇಶವಾದ್ದರಿಂದ ಇಲ್ಲಿನ ದೇವಸ್ಥಾನಗಳ ವಾಸ್ತುಶಿಲ್ಪ ವಿಶಿಷ್ಟವಾಗಿದ್ದು  ಮಳೆ ನೀರು ಗೋಡೆಗಳಿಗೆ ತಾಗದಂತೆ ಇಳಿಜಾರು ಮೇಲ್ಛಾವಣಿಗಳನ್ನು ನಿರ್ಮಿಸಲಾಗಿದೆ. ಶತಮಾನಗಳಿಂದ ದೇವಾಲಯದ ಗೋಡೆಗಳು ಗಟ್ಟಿಯಾಗಿರುವುದರ ಹಿಂದಿನ ಕಾರಣ ಇದೇ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈಗ ಪುನರ್ನಿಮಾಣಗೊಳ್ಳಬೇಕಿರುವ ಕಾಮಗಾರಿಗಳಲ್ಲಿಯೂ ಸಹ ಸಾಂಪ್ರದಾಯಿಕ ವಸ್ತುಗಳು ಹಾಗೂ ಹಿಂದಿನ ಶೈಲಿಯನ್ನೇ ಅನುಸರಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com