ಎಸ್.ರಂಜನ್
ಎಸ್.ರಂಜನ್

625ಕ್ಕೆ 625 ಅಂಕ ಪಡೆದ ರಂಜನ್ ರಾಜ್ಯಕ್ಕೆ ಪ್ರಥಮ

2015-16ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿಯ...
ಬೆಂಗಳೂರು: 2015-16ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ಎಸ್.ರಂಜನ್ ಅವರು ಇದೇ ಮೊದಲ ಬಾರಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಧ್ಯಮ ವರ್ಗದ ಕುಟುಂಬದಿಂದ ಬಂದ ರಂಜನ್ ಟ್ಯೂಷನ್ ಹಂಗಿಲ್ಲದೇ ತನ್ನಷ್ಟಕ್ಕೆ ತಾನೇ ಓದಿಕೊಂಡು ಗಮನಾರ್ಹ ಸಾಧನೆ ಮಾಡಿದ್ದಾನೆ.
ಭದ್ರಾವತಿಯಲ್ಲಿ ವಾಸವಿರುವ ರಂಜನ್ ತಂದೆ ಬಿ.ಎಸ್.ಶಂಕರನಾರಾಯಣ ಅವರು ಮಂಗಳೂರು ಟೈಲ್ಸ್​ನ ವಿತರಕರಾಗಿದ್ದು, ತಾಯಿ ತ್ರಿವೇಣಿ ಗೃಹಿಣಿಯಾಗಿದ್ದಾರೆ. ರಂಜನ್ ಅಕ್ಕ ರಚನಾ ತುಮಕೂರಿನ ಸಿದ್ದಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿ ಸದ್ಯ ಉದ್ಯೋಗದಲ್ಲಿದ್ದಾರೆ.
ಇನ್ನು ಫಲಿತಾಂಶದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಂಜನ್, 625ಕ್ಕೆ 625 ಅಂಕ ಬಂದಿದ್ದನ್ನು ನೋಡಿ ನನ್ನ ಕಣ್ಣನ್ನು ನಾನೇ ನಂಬಲಿಲ್ಲ. ಫಲಿತಾಂಶ ನೋಡಿ ಒಂದು ಕ್ಷಣ ಸಂತಸದಿಂದ ಕುಣಿದಾಡಿಬಿಟ್ಟೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com