ವೇಶ್ಯಾವಾಟಿಕೆ ಅಡ್ಡೆಗಿಂತಲೂ ಕೀಳು ಖಾಸಗಿ ಶಾಲೆಗಳ ದಂಧೆ: ಸಚಿವ ಆಂಜನೇಯ

ಖಾಸಗಿ ಶಾಲೆಗಳ ವರ್ತನೆಯು ವೇಶ್ಯಾವಾಟಿಕೆಗಿಂತ ಕಡೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್‌.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಆಂಜನೇಯ
ಆಂಜನೇಯ

ಬೆಂಗಳೂರು: ಖಾಸಗಿ ಶಾಲೆಗಳ ವರ್ತನೆಯು ವೇಶ್ಯಾವಾಟಿಕೆಗಿಂತ ಕಡೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್‌.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕುರುಬರಹಳ್ಳಿಯ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ 'ಆರ್ಟ್‌ ಆಫ್‌ ಗಿವಿಂಗ್‌'ನ ಮೂರನೇ ವಾರ್ಷಿಕೋತ್ಸವದಲ್ಲಿ  ಮಾತನಾಡಿದ ಅವರು,  ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿವೆ. ಅವರಲ್ಲಿ ಸ್ವಲ್ಪವೂ ನೀತಿ, ನಿಯಮ, ಮಾನವೀಯತೆ ಇಲ್ಲ. ವಿದ್ಯಾರ್ಥಿಗಳ ಪೋಷಕರಿಂದ ಹಣ ವಸೂಲಿ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ.

ಕಡ್ಡಾಯ ಶಿಕ್ಷಣ ಕಾಯ್ದೆ ಅನಿವಾರ್ಯ ಆಗಿರುವುದರಿಂದ ಪ್ರತಿ ವರ್ಷ ಹೊಟ್ಟೆ ಉರಿದುಕೊಂಡು ಬಡ ಮಕ್ಕಳಿಗೆ ಶೇ.25ರಷ್ಟು ಸೀಟು ನೀಡುತ್ತಿವೆ. ಅವರ ಈ ವರ್ತನೆ ವೇಶ್ಯಾವಾಟಿಕೆಗಿಂತ ಕಡೆಯಾಗಿದೆ ಎಂದು ಟೀಕಿಸಿದರು.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳು ಶೇ.90ರಷ್ಟು ಅಂಕ ಗಳಿಸಿದ ಮಕ್ಕಳಿಗೆ ಮಾತ್ರ ಪ್ರವೇಶ ನೀಡುತ್ತಿವೆ. ಬುದ್ಧಿವಂತ ವಿದ್ಯಾರ್ಥಿಗಳನ್ನು ಮಾತ್ರ ತಮ್ಮ ಶಾಲೆಗೆ ಸೇರಿಸಿಕೊಂಡು ಅವರನ್ನು ರಾರ‍ಯಂಕ್‌ ಗಳಿಸುವಂತೆ ಮಾಡುವುದೇ ದೊಡ್ಡ ಸಾಧನೆ ಎಂದು ಖಾಸಗಿ ಶಾಲೆಗಳು ತಿಳಿದುಕೊಂಡಿವೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com