ಟಿಪ್ಪು ಸುಲ್ತಾನ್ ಒಬ್ಬ ಕ್ರೂರಿ ಮೂಲಭೂತವಾದಿ: ಮೋಹನ್ ದಾಸ್ ಪೈ

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಹೊರಟಿರುವುದು, ಕೇಂದ್ರ ಸರ್ಕಾರ ಔರಂಗಜೇಬ್‌ನ ಜಯಂತಿ ಆಚರಣೆಗೆ ಮುಂದಾದಂತೆ ಎಂದು....
ಮೋಹನ್ ದಾಸ್ ಪೈ
ಮೋಹನ್ ದಾಸ್ ಪೈ
Updated on

ಬೆಂಗಳೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಹೊರಟಿರುವುದು, ಕೇಂದ್ರ ಸರ್ಕಾರ ಔರಂಗಜೇಬ್‌ನ ಜಯಂತಿ ಆಚರಣೆಗೆ ಮುಂದಾದಂತೆ ಎಂದು  ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ  ಟಿ.ವಿ ಮೋಹನ್ ದಾಸ್ ಪೈ ಅಭಿಪ್ರಾಯ ಪಟ್ಟಿದ್ದಾರೆ.  

ಸರ್ಕಾರ ಈ ವಿಷಯದಲ್ಲಿ ರಾಜಕೀಯ ಮಾಡಲು ಹೋಗಬಾರದು. ಪಕ್ಷದ ವೇದಿಕೆಯಲ್ಲಿ ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸಲಿ. ಆದರೆ, ಸರ್ಕಾರಿ ವ್ಯವಸ್ಥೆಯನ್ನು ಅದಕ್ಕೆ ಬಳಕೆ ಮಾಡುವುದು ಬೇಡ ಎಂದು ಅವರು ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಒಬ್ಬ ಕ್ರೂರಿ, ಮೂಲಭೂತವಾದಿ. ಸಾವಿರಾರು ಜನರ ಕಗ್ಗೊಲೆಗೆ ಆತ ಕಾರಣವಾಗಿದ್ದಾನೆ. ಇಂತಹ ವಿವಾದಿತ ವ್ಯಕ್ತಿಯ ಜಯಂತಿಯನ್ನು ಸರ್ಕಾರದಿಂದ ಆಚರಿಸುವುದು ಬೇಡ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ಮತಾಂತರ ಮಾಡಿದ ವ್ಯಕ್ತಿ ಟಿಪ್ಪು. ಮಂಗಳೂರಿನ ಕ್ಯಾಥೊಲಿಕ್‌ ಸಮುದಾಯದ 20 ಸಾವಿರ ಜನರನ್ನು ಶ್ರೀರಂಗಪಟ್ಟಣದಲ್ಲಿ ಬಂಧಿಸಿಟ್ಟಿದ್ದ. ಶೃಂಗೇರಿ ಮಠಕ್ಕೆ ಆತ ಕೊಡುಗೆ ನೀಡಿದ ಕುರಿತು ದೊಡ್ಡದಾಗಿ ಬಿಂಬಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದಿಂದ ಜಯಂತಿ ಆಚರಿಸಲೇ ಬೇಕು ಎಂದಾದರೆ ಮೈಸೂರು ಒಡೆಯರ್, ಸರ್‌ ಮಿರ್ಜಾ ಇಸ್ಮಾಯಿಲ್‌, ಸರ್‌ ಎಂ.ವಿಶ್ವೇಶ್ವರಯ್ಯ ಅವರಂತಹ ಮಹಾನ್‌ ವ್ಯಕ್ತಿಗಳ ಜಯಂತಿ ಆಚರಿಸಲಿ. ಇವರೆಲ್ಲ ನಾಡಿನ ಪ್ರಗತಿಗಾಗಿ ಕೊಡುಗೆ ನೀಡಿದವರು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com