ಟಿಪ್ಪು ಜಯಂತಿ ಯಾಕೆ ಆಚರಿಸಬೇಕು: ಹೈಕೋರ್ಟ್ ಪ್ರಶ್ನೆ

ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದರಿಂದ ಸರ್ಕಾರಕ್ಕೆ ತಲೆನೋವು, ಹೀಗಿದ್ದರೂ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಉದ್ದೇಶವೇನು? ಟಿಪ್ಪು ಜಯಂತಿ ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದರಿಂದ ಸರ್ಕಾರಕ್ಕೆ ತಲೆನೋವು, ಹೀಗಿದ್ದರೂ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಉದ್ದೇಶವೇನು? ಟಿಪ್ಪು ಜಯಂತಿ ಆಚರಣೆಯಿಂದ ಏನು ಪ್ರಯೋಜನ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಮಂಜುನಾಥ್ ಎಂಬುವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎಸ್. ಕೆ ಮುಖರ್ಜಿ  ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಸುಲ್ತಾನ್ ಆಗಿನ ಸಂಸ್ಥಾನವೊಂದರ ರಾಜ. ಬ್ರಿಟಿಷರು ನಿಜಾಮರ ಮೇಲೆ ದಾಳಿ ಮಾಡಿದ್ದರಿಂದ ಯುದ್ಧ ಮಾಡಿದ, ಹಾಗೆಂದು ನಿಜಾಮರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ನ.10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್ ಜಯಂತಿಗೆ ತಡೆ ಕೋರಿ ಮಂಜುನಾಥ್ ಎಂಬವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.

ಟಿಪ್ಪು ಜಯಂತಿ ಆಚರಿಸುವ ಅಗತ್ಯವಾದರೂ ಏನಿದೆ. ಎಲ್ಲಾ ರಾಜರಂತೆ ಟಿಪ್ಪು ಕೂಡಾ ತಮ್ಮ ಸಂಸ್ಥಾನ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ. ಹಾಗಾಗಿ ಟಿಪ್ಪು ಶಾಂತಿಯಿಂದ ವಿರಮಿಸಲಿ ಎಂದು ಸಿಜೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿ, ಅರ್ಜಿ ವಿಚಾರಣೆಯನ್ನು ನಾಳೆಗೆ  ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com