ದೇಶದ ಪ್ರಮುಖ ಸುಧಾರಣಾ ತೆರಿಗೆ ವಿಧಾನ ಎಂದು ಹೇಳಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ ಕೇಂದ್ರ ಸರ್ಕಾರಕ್ಕೆ ವರವಾದರೆ, ರಾಜ್ಯ ಸರ್ಕಾರಗಳಿಗೆ ಶಾಪವಾಗಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ತನ್ನ ವ್ಯಾಪಾರ ಮೂಲವನ್ನು ಕಳೆದುಕೊಳ್ಳಲಿದ್ದು ಶೇಕಡಾ 50ಕ್ಕಿಂತ ಹೆಚ್ಚು ಉದ್ಯೋಗಗಳನ್ನು ಕಳೆದುಕೊಳ್ಳಲಿದೆ ಎಂದು ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳ (ಅಧಿಕಾರಿಗಳು) ಅಸೋಸಿಯೇಷನ್ ನ ಉಪಾಧ್ಯಕ್ಷ ಫಣಿರಾಜ್ ಡಿ.ವಿ ತಿಳಿಸಿದ್ದಾರೆ.