ಮೈಸೂರಿನಲ್ಲಿ 79 ಕೋಟಿ ರು ಮೌಲ್ಯದ ಬೆಳೆ ನಷ್ಟ: ಜಂಟಿ ಸಮೀಕ್ಷೆ ವರದಿ

ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಮೈಸೂರಿನಲ್ಲಿ ಸುಮಾರು 79 ಕೋಟಿ ರೂ ಮೌಲ್ಯದ ಬೆಳೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು; ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸತತ 2ನೇ ವರ್ಷವೂ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಭಾರೀ ಬೆಳೆ ನಷ್ಟ ಅನುಭವಿಸುತ್ತಿವೆ.

ಮೈಸೂರು ಜಿಲ್ಲೆ ಶೇ. 44 ರಷ್ಟು ಮಳೆ ಕೊರತೆ ಅನುಭವಿಸುತ್ತಿದ್ದು, 1.18 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಬೆಳೆ ಮಳೆ ಇಲ್ಲಾದ ಕಾರಣ ನಾಶವಾಗಿದೆ.

ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಮೈಸೂರಿನಲ್ಲಿ ಸುಮಾರು 79 ಕೋಟಿ ರೂ ಮೌಲ್ಯದ ಬೆಳೆ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಸರಾಸರಿ 723.6 ಮಿಮಿ ಮಳೆಯಾಗುತ್ತಿತ್ತು. ಆದರೆ ಈ ವರ್ಷದ ಅಕ್ಟೋಬರ್ 25 ರವರೆಗೆ ಕೇವಲ 408 ಮಿಮಿ ಮಾತ್ರ ಮಳೆಯಾಗಿದೆ. ರೈತರು ರಾಗಿ, ಜೋಳ, ಧಾನ್ಯ ಮತ್ತು ತಂಬಾಕು ಬೆಳೆ ಕೃಷಿ ಮಾಡಿದ್ದರು, ಆದರೆ ಮಳೆಯಿಲ್ಲದ ಕಾರಣ ಬಿತ್ತಿದ್ದ ಬೆಳೆಯಲ್ಲಾ ನಾಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com