ರುದ್ರೇಶ್ ಹತ್ಯೆ ಪ್ರಕರಣ: ಆರೋಪಿಗಳಿಗೆ ನಿಷೇಧಿತ ಆಲ್ ಉಮ್ಮಾ ಸಂಘಟನೆ ನಂಟು

ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ನಿಷೇಧಿತ ಆಲ್...
ರುದ್ರೇಶ್
ರುದ್ರೇಶ್

ಬೆಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ನಿಷೇಧಿತ ಆಲ್ -ಉಮ್ಮಾ ಸಂಘಟನೆಯ ನಂಟು ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಕಳೆದ ಏಪ್ರಿಲ್ ನಿಂದ ದಕ್ಷಿಣ ಭಾರತದ ಹಲವು ನ್ಯಾಯಾಲಗಳ ಆವರಣದಲ್ಲಿ ನಡೆದ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ.

ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಕೊಲ್ಲುವುದು ಹಾಗೂ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟಿಸಲು ಉತ್ತರ ಕೇರಳದಲ್ಲಿ  ಇರ್ಫಾನ್ ಪಾಷಾ ಎಂಬಾತನ ಜೊತೆ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು.

ಸಂಘಟನೆಯ ಕಾರ್ಯಕರ್ತನ ಮದುವೆ ಸಮಾರಂಭದಲ್ಲಿ ಈ ಸಂಬಂಧ ಚರ್ಚೆ ನಡೆಸಲಾಗಿತ್ತು. ಆರೋಪಿಗಳಿಗೆ ಆಲ್ ಉಮ್ಮಾ ಸೇರಿದಂತೆ ಹಲವು ಸಂಘಟನೆಗಳ ಜೊತೆ ನಂಟು ಹೊಂದಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅವರಿಂದ ಮಾಹಿತಿ ಕಲೆ ಹಾಕಲು ಕಷ್ಟವಾಗುತ್ತಿದೆ ಎಂದು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಇರ್ಫಾನ್ ಪಾಶಾ ರುದ್ರೇಶ್ ಅವರನ್ನು ಕೊಲ್ಲಲು ಸೀಮೆ ಸುಣ್ಣ ಬಳಸಿ, ಅವನ ಹೆಸರು ಮತ್ತು ಯೋಜನೆ ರೂಪಿಸಿದ್ದನು. ಶಿವಾಜಿನಗರದಲ್ಲಿ ನಿಷ್ಟಾವಂತ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ರುದ್ರೇಶ್ ಕೊಲೆ ನಂತರ ಆರೋಪಿ ಕೇರಳ, ಕುಪ್ಪಂ, ಚಿತ್ತೂರು ಗಳಿಗೆ ಪ್ರಯಾಣಿಸಿದ್ದಾನೆ. ಪೊಲೀಸರಿಗೆ ನಾವೇ ಕೊಲೆ ಮಾಡಿದ್ದು ಎಂಬುದರ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಅವರು ಕೊಲೆ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಆತ ಎಣಿಸಿದ್ದ. ಆದರೆ ಆತನ ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆದಿತ್ತು, ಆತ ಕೇರಳದಿಂದ ಬೆಂಗಳೂರಿಗೆ ವಾಪಸ್  ಬಂದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com