ಹಂಪಿ ಉತ್ಸವ: ವಿರೂಪಾಕ್ಷ ದೇವರ 10 ಕೆಜಿ ಚಿನ್ನದ ಕಿರೀಟ ಎಲ್ಲರ ಆಕರ್ಷಣೆಯ ಕೇಂದ್ರ

ಹಂಪಿ ಉತ್ಸವ ಗತಕಾಲದ ವೈಭವವನ್ನು ಮರುಕಳಿಸುವಂತಿದೆ. ಇದಕ್ಕೆ ಕಾರಣ ಹಂಪಿಯಲ್ಲಿರುವ ವಿರೂಪಾಕ್ಷ ದೇವರು, ವಿರೂಪಾಕ್ಷನ 10 ಕೆಜಿ ತೂಕದ ಚಿನ್ನದ ಕಿರೀಟ ...
ಹಂಪಿ ಉತ್ಸವದ ನೋಟ
ಹಂಪಿ ಉತ್ಸವದ ನೋಟ
Updated on

ಹಂಪಿ: ಹಂಪಿ ಉತ್ಸವ ಗತಕಾಲದ ವೈಭವವನ್ನು ಮರುಕಳಿಸುವಂತಿದೆ. ಇದಕ್ಕೆ ಕಾರಣ ಹಂಪಿಯಲ್ಲಿರುವ ವಿರೂಪಾಕ್ಷ ದೇವರು, ವಿರೂಪಾಕ್ಷನ 10 ಕೆಜಿ ತೂಕದ ಚಿನ್ನದ ಕಿರೀಟ ನೋಡಲು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಸಿದ್ದಾರೆ.

1509 ರಲ್ಲಿ ರಾಜ ಕೃಷ್ಣದೇವರಾಯ ಹಂಪಿ ವಿರೂಪಾಕ್ಷನಿಗೆ 10 ಕೆಜಿ ತೂಕದ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು. ವಿಜಯ ನಗರ ಸಂತತಿ ಅಳಿದು ಇತಿಹಾಸ ಸೇರಿದೆ. ಆದರೆ ವಿಜಯನಗರ ಅರಸರ ಗತ ವೈಭವವನ್ನು ಹಾಗೂ 15 ನೇ ಶತಮಾನಗ ಕಲಾ ಶ್ರೀಮಂತಿಕೆಗೆ ಈ ಕಿರೀಟ ಸಾಕ್ಷಿಯಾಗಿದೆ.

ವಿದೇಶಿ ಪ್ರವಾಸಿಗರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದಿರುವ  ಸಾವಿರಾರು ಭಕ್ತರು ಚಿನ್ನದ ಕಿರೀಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಶೇಷ ದಿನಗಳಲ್ಲಿ ವಿರೂಪಾಕ್ಷ ವಿಗ್ರಹಕ್ಕೆ ಚಿನ್ನದ ಕಿರೀಟದಿಂದ ಅಲಂಕಾರ ಮಾಡಲಾಗುತ್ತದೆ, ಅನಂತರ ಈ ಕಿರೀಟವನ್ನು ಸರ್ಕಾರದ ಖಜಾನೆಯಲ್ಲಿಡಲಾಗುತ್ತದೆ,. ವರ್ಷದಲ್ಲಿ 11 ಬಾರಿ ಭಕ್ತರು ಈ ಕಿರೀಟವನ್ನು ನೋಡಲು ಅವಕಾಶವಿರುತ್ತದೆ.

ವಿರೂಪಾಕ್ಷ ದೇವಾಲಯದ ಮುಂದೆ, ಮುತ್ತು ರತ್ನ ಗಳನ್ನು ಜನ ರಸ್ತೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ, ಇನ್ನೂ ಕೃಷ್ಣದೇವರಾಯ ಸಮರ್ಪಿಸಿರುವ ಈ ಕಿರೀಟ ಪ್ರಸಕ್ತ ಮಾರುಕಟ್ಟೆ ಬೆಲೆಯಲ್ಲಿ 3 ಕೋಟಿ ರೂ ಆಗಲಿದೆ. ಹೀಗಾಗಿ ಬಿಗಿ ಭದ್ರತೆಯಲ್ಲಿ ಕಿರೀಟವನ್ನು ಇಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com