ಬೆಂಗಳೂರು ಜಲಮಂಡಳಿ ದಿನಕ್ಕೆ ಪಾವತಿಸುವ ವಿದ್ಯುತ್ ಬಿಲ್ ಎಷ್ಟು ಗೊತ್ತಾ?

ಬೆಂಗಳೂರು ನೀರು ಸರಬರಾಜು ಮಂಡಳಿ ತಿಂಗಳಿಗೆ ಒಟ್ಟು 32 ಇಲ್ಲವೇ 33 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಅದರೆ ದಿನವೊಂದಕ್ಕೆ ...
ಬೆಂಗಳೂರು ನೀರು ಸರಬರಾಜು ಮಂಡಳಿ
ಬೆಂಗಳೂರು ನೀರು ಸರಬರಾಜು ಮಂಡಳಿ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮಂಡಳಿ ತಿಂಗಳಿಗೆ ಒಟ್ಟು 32 ಇಲ್ಲವೇ 33 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಅದರೆ ದಿನವೊಂದಕ್ಕೆ 1 ಕೋಟಿ ರೂಪಾಯಿ ವಿದ್ಯುತ್ ಬಿಲ್ ಆಗಿ ಪಾವತಿಸುತ್ತಿದೆ.

ಬೆಂಗಳೂರು ಜಲ ಮಂಡಳಿಗೆ ಬರುವ ಆದಾಯದಲ್ಲಿ ಮೂರನೇ ಒಂದು ಭಾಗ ಹಣ ವಿದ್ಯುತ್ ಬಿಲ್ ಗೆ ಹೋಗುತ್ತದೆ. ಆಗಸ್ಟ್ ಮತ್ತು ಸೆಪ್ಬಂಬರ್ ತಿಂಗಳಲ್ಲಿ 99 ಕೋಟಿ ರೂ ಹಣ ಸಂಗ್ರಹವಾಗಿತ್ತು ಎಂದು ಬೆಂಗಳೂರು ಜಲ ಮಂಡಳಿ ಮುಖ್ಯ ಎಂಜಿನೀಯರ್ ಕೆಂಪರಾಮಯ್ಯ ತಿಳಿಸಿದ್ದಾರೆ.

ಈ ಮೊದಲಿಗೆ ಆದಾಯದ ಎರಡು ಪಟ್ಟು ವಿದ್ಯುತ್ ಬಿಲ್ ಬರುತ್ತಿತ್ತು, ಆದರೆ 2004 ರ ನೀರು ದರ ಪರಿಷ್ಕರಣೆ ಪರಿಣಾಮ ವಿದ್ಯುತ್ ಬಿಲ್ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ 11 ಕೋಟಿ, ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ನಿಗಮಕ್ಕೆ 21 ಕೋಟಿ ರೂ, ತಾತಗುಣಿ ಮತ್ತು ಹಾರೋಹಳ್ಳಿ ವಿದ್ಯುತ್ ನಿಗಮಕ್ಕೆ ತಲಾ 10.5 ಕೋಟಿ ರೂ ಪಾವತಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com