ನಗರಕ್ಕಿಂದು ತೆರೆಸಾ ಮೇ: ಹಲವು ಮಾರ್ಗಗಳಲ್ಲಿ ವಾಹನ ನಿಲುಗಡೆ ನಿರ್ಬಂಧ

ಬ್ರಿಟಿಷ್ ಪ್ರಧಾನ ಮಂತ್ರಿ ತೆರೆಸಾ ಮೇ ಮಂಗಳವಾರ ನಗರದಲ್ಲಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ...
ಬ್ರಿಟನ್ ಪ್ರಧಾನಿ ತೆರೆಸಾ ಮೇ
ಬ್ರಿಟನ್ ಪ್ರಧಾನಿ ತೆರೆಸಾ ಮೇ
ಬೆಂಗಳೂರು: ಬ್ರಿಟಿಷ್ ಪ್ರಧಾನ ಮಂತ್ರಿ ತೆರೆಸಾ ಮೇ ಮಂಗಳವಾರ ನಗರದಲ್ಲಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಹಲವು ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಪಾರ್ಕಿಂಗ್ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.ತೀವ್ರ ಭದ್ರತೆ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಸಾರ್ವಜನಿಕರು ಆದಷ್ಟು ಸಂಚಾರವನ್ನು ತಪ್ಪಿಸುವಂತೆ ಹೇಳಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿ ಸಂಜಯನಗರ ಕ್ರಾಸ್ ನಿಂದ ಮೇಕ್ರಿ ವೃತ್ತದವರೆಗೆ, ಸರ್ ಸಿ ವಿ ರಾಮನ್ ರಸ್ತೆಯಿಂದ ಮೇಕ್ರಿ ಸರ್ಕಲ್ ಆಗಿ ಬಿಇಎಲ್ ವೃತ್ತದವರೆಗೆ, ರಮಣಮಹರ್ಷಿ ರಸ್ತೆಯಿಂದ ಮೇಕ್ರಿ ಸರ್ಕಲ್ ಆಗಿ ಕಾವೇರಿ ಜಂಕ್ಷನ್ ವರೆಗೆ, ಟಿ. ಚೌಡಯ್ಯ ರಸ್ತೆಯಿಂದ ಕಾವೇರಿ ಜಂಕ್ಷನ್ ನಿಂದ ರಾಜ್ ಭವನದವರೆಗೆ, ಇನ್ ಫೆಂಟ್ರಿ ರಸ್ತೆ-ಆಲಿ ಅಸ್ಕರ್ ರಸ್ತೆ ಜಂಕ್ಷನ್ ನಿಂದ ಟ್ರಾಫಿಕ್ ಕೇಂದ್ರ ಕಚೇರಿ ಜಂಕ್ಷನ್ ವರೆಗೆ, ಕ್ವೀನ್ಸ್ ರೋಡ್-ಟ್ರಾಫಿಕ್ ಕೇಂದ್ರ ಕಚೇರಿಯಿಂದ ಸಿಟಿಒ ಸರ್ಕಲ್ ವರೆಗೆ, ಕಾಮರಾಜ ರಸ್ತೆ-ಕೆಆರ್ ರಸ್ತೆಯಿಂದ ಕಾವೇರಿ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಜಂಕ್ಷನ್ ವರೆಗೆ ಕಬ್ಬನ್ ರಸ್ತೆಯಾಗಿ, ಎಂಜಿ ರಸ್ತೆಯಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ, ಸೆಂಟ್ರಲ್ ಸ್ಟ್ರೀಟ್ ನಿಂದ ಅನಿಲ್ ಕುಂಬ್ಳೆ ಜಂಕ್ಷನ್ ನಿಂದ ಬಿಆರ್ ವಿ ಜಂಕ್ಷನ್ ವರೆಗೆ, ರಾಜ್ ಭವನ್ ರಸ್ತೆಯಿಂದ ಸಿಟಿಒ ಸರ್ಕಲ್ ವರೆಗೆ ಎಲ್ ಎಚ್ ರಸ್ತೆ-ರಾಜ್ ಭವನ, ಬಸವೇಶ್ವರ ವೃತ್ತ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆಯಿಂದ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಗೆ, ನ್ಯೂ ಬಿಎಲ್ ರಸ್ತೆ, ದೇವಸಂದ್ರ ಜಂಕ್ಷನ್ ನಿಂದ ಸದಾಶಿವನಗರ ಪೊಲೀಸ್ ಸ್ಟೇಷನ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ-ಸ್ಟೋನ್ ಹಿಲ್ ಸ್ಕೂಲ್ ನಿಂದ ಡೈನಮ್ಯಾಟಿಕ್ ಟೆಕ್ನಾಲಜೀಸ್ ಲಿಮಿಟೆಡ್, ಡೈನಮ್ಯಾಟಿಕ್ ಪ್ಲಾಂಟ್ ನಿಂದ ಎಂಜಿ ರಸ್ತೆಯ ಬಾರ್ಟನ್ ಸೆಂಟರ್, ಬಾರ್ಟನ್ ಸೆಂಟರ್ ನಿಂದ ತಾಜ್ ವಿವಾಂತ, ತಾಜ್ ವಿವಾಂತದಿಂದ ಹಲಸೂರು ಸೋಮೇಶ್ವರ ದೇವಸ್ಥಾನ  ಮಾರ್ಗಗಳಲ್ಲಿ ಇಂದು ಸಾರ್ವಜನಿಕರು ರಸ್ತೆ ಸಂಚಾರವನ್ನು  ತಪ್ಪಿಸಿಕೊಳ್ಳುವುದು ಉತ್ತಮ.
ಈ ಮಾರ್ಗಗಳಲ್ಲಿ ವಾಹನ ನಿಲುಗಡೆಯನ್ನು ಕೂಡ ನಿಷೇಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com