ಪೌರ ಕಾರ್ಮಿಕರಿಗೆ ಉಚಿತ ಊಟ, ಬಟ್ಟೆ ವಸತಿ ಸೌಲಭ್ಯ

ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಕೇಂದ್ರೀಕರಿಸಿರುವ ರಾಜ್ಯ ಸರ್ಕಾರ ಎಲ್ಲಾ ಪೌರ ಕಾರ್ಮಿಕರಿಗೆ ಉಚಿತ ಮಧ್ಯಾಹ್ನದ ಬಿಸಿಯೂಟ, ವಸತಿ ಹಾಗೂ ಬಟ್ಟೆ...
ಪೌರ ಕಾರ್ಮಿಕರ ಊಟದ ಯೋಜನೆಗೆ ಚಾಲನೆ ನೀಡಿದ ಸಿಎಂ
ಪೌರ ಕಾರ್ಮಿಕರ ಊಟದ ಯೋಜನೆಗೆ ಚಾಲನೆ ನೀಡಿದ ಸಿಎಂ

ಬೆಂಗಳೂರು: ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಕೇಂದ್ರೀಕರಿಸಿರುವ ರಾಜ್ಯ ಸರ್ಕಾರ ಎಲ್ಲಾ ಪೌರ ಕಾರ್ಮಿಕರಿಗೆ ಉಚಿತ ಮಧ್ಯಾಹ್ನದ ಬಿಸಿಯೂಟ, ವಸತಿ ಹಾಗೂ ಬಟ್ಟೆ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಬಿಬಿಎಂಪಿ ವತಿಯಿಂದ 32 ಸಾವಿರ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಆರಂಭಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಬಿಬಿಎಂಪಿಯಲ್ಲಿ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

ಪ್ರತಿದಿನ ಅನ್ನ ಸಾರು, ಮಜ್ಜಿಗೆ ಮತ್ತು ಹಾಲು ನೀಡಲಾಗುತ್ತದೆ. ಇಸ್ಕಾನ್ ಪೌರ ಕಾರ್ಮಿಕರಿಗೆ ಬೆಳಗ್ಗೆ 10.30 ರಿಂದ ರಾತ್ರಿ 11 ವರೆಗೂ ಊಟ ನೀಡಲಾಗುತ್ತದೆ.

ಪೌರ ಕಾರ್ಮಿಕರಿಗೆ ಊಟ ನೀಡಲು ರಸ್ತೆಯ ಮ್ಯಾಪ್ ಸಿದ್ದ ಪಡಿಸಲಾಗಿದೆ, ವಾಹನದಲ್ಲಿ ಊಟದ ಪ್ಯಾಕೆಟ್ ಗಳನ್ನು ನೀಡಲಾಗುತ್ತದೆ. ಇತರ ಜಿಲ್ಲೆಗಳ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲಾಗುತ್ತದೆ.

ಪೌರ ಕಾರ್ಮಿಕರಿಗೆ ಬಿಡಿಎ ವತಿಯಿಂದ ಫ್ಲ್ಯಾಟ್ ಗಳನ್ನು ನೀಡಲು ಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com