ಬೆಂಗಳೂರು: ಸಬ್ ಇನ್ಸ್ ಪೆಕ್ಟರ್ ಗೆ ಚಾಕುವಿನಿಂದ ಇರಿದ ಆಟೋ ಚಾಲಕ

53 ವರ್ಷದ ಸಂಚಾರಿ ಠಾಣೆಯ ಎಸ್ ಐ ಗೆ ಆಟೋರಿಕ್ಷಾ ಚಾಲಕ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 53 ವರ್ಷದ ಸಂಚಾರಿ ಠಾಣೆಯ ಎಸ್ ಐ ಗೆ ಆಟೋರಿಕ್ಷಾ ಚಾಲಕ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ಎಸ್ ಐ ವೆಂಕಟೇಶಯ್ಯ ಅವರಿಗೆ ಆಟೋ ಚಾಲಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಬೆಳಿಗ್ಗೆ 10.45 ರ ಸುಮಾರಿಗೆ ವೆಂಕಟಪ್ಪ ಅವರು ಬನಶಂಕರಿ ಬಸ್‌ ನಿಲ್ದಾಣದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಆಟೊ ನಿಲ್ಲಿಸಿಕೊಂಡಿದ್ದ ಚಾಲಕ, ಬಾಡಿಗೆ ಕೇಳಿಕೊಂಡು ಬಂದ ಮೂರ್ನಾಲ್ಕು ಮಂದಿಯನ್ನು ವಾಪಸ್ ಕಳುಹಿಸಿದ್ದ. ಇದನ್ನು ನೋಡಿದ ವೆಂಕಟಪ್ಪ, ಕರೆದ ಕಡೆ ಬಾಡಿಗೆ ಹೋಗುವಂತೆ ಆತನಿಗೆ ಸೂಚಿಸಿದ್ದಾರೆ.

ಕರೆದ ಕಡೆಗೆಲ್ಲ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಎಸ್‌ಐ, ಠಾಣೆಯ ಕಡೆಗೆ ವಾಹನ ತಿರುಗಿಸು. ಅಲ್ಲೇ ತೀರ್ಮಾನ ಮಾಡೋಣ ಎಂದು ಆಟೊ ಹತ್ತಿ ಕುಳಿತಿದ್ದಾರೆ. ಆದರೆ ಆಟೋ ಚಾಲನೆ ಮಾಡದೇ ವೆಂಕಟೇಶಯ್ಯ ವಿರುದ್ಧ ಮಾತಿನ ಚಕಮಕಿ ಮುಂದುವರಿಸಿದ್ದಾನೆ. ಈ ವೇಳೆ ಸಾಕ್ಸ್‌ನಲ್ಲಿ ಇಟ್ಟುಕೊಂಡಿದ್ದ ಚಾಕು ತೆಗೆದ ಆರೋಪಿ, ಬೆನ್ನು ಹಾಗೂ ಕೈಗಳಿಗೆ ಇರಿದು ಆಟೊದೊಂದಿಗೆ ಪರಾರಿಯಾಗಿದ್ದಾನೆ. ಸ್ಥಳೀಯರು ಹಾಗೂ ಜಂಕ್ಷನ್‌ನಲ್ಲಿದ್ದ ಸಿಬ್ಬಂದಿ ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಆಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಘಟನೆ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com