ಕರ್ನಾಟಕದಲ್ಲಿ ಪತ್ತೆಯಾಯ್ತು 2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು

: 2000 ರು ಮುಖಬೆಲೆಯ ನೋಟು ಹೋಲುವಂತಹ ಜೆರಾಕ್ಸ್ ನೋಟು ನೀಡಿ ರೈತನಿಗೆ ಈರುಳ್ಳಿ ವ್ಯಾಪಾರಿಯೊಬ್ಬ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ
2ಸಾವಿರ ರು ನ ಜೆರಾಕ್ಸ್ ಪ್ರತಿ
2ಸಾವಿರ ರು ನ ಜೆರಾಕ್ಸ್ ಪ್ರತಿ

ಚಿಕ್ಕಮಗಳೂರು: 2000 ರು ಮುಖಬೆಲೆಯ ನೋಟು  ಹೋಲುವಂತಹ ಜೆರಾಕ್ಸ್ ನೋಟು ನೀಡಿ ರೈತನಿಗೆ ಈರುಳ್ಳಿ ವ್ಯಾಪಾರಿಯೊಬ್ಬ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತ ಅಶೋಕ್ ಎಂಬುವರಿಗೆ  ಈರುಳ್ಳಿ ಖರೀದಿಸಿದ ವ್ಯಕ್ತಿ ನಕಲಿ ನೋಟು ನೀಡಿ ವಂಚಿಸಿದ್ದಾನೆ.

ಅಶೋಕ್ ಅಂಗಡಿಗೆ ಬಂದ ವರ್ತಕ 2ಸಾವಿರ ರುಪಾಯಿನ ಜೆರಾಕ್ಸ್  ನೋಟ್ ನೀಡಿ 3 ಚೀಲ ಈರುಳ್ಳಿ ಖರೀದಿಸಿ ಯಾಮಾರಿಸಿದ್ದಾನೆ. ತನ್ನ ಬಳಿಯಿದ್ದ ಎರಡು ಸಾವಿರ ರೂ ನೋಟನ್ನು ಅಶೋಕ್ ತನ್ನ ಸ್ನೇಹಿತರಿಗೆ ತೋರಿಸಿದಾಗ ಅದು ನಕಲಿ ನೋಟ್ ಎಂದು ತಿಳಿದು ಬಂದಿದೆ.

ಈ ನೋಟಿನ ಬಾರ್ಡರ್‍ನಲ್ಲಿ ಕತ್ತರಿಯಿಂದ ಕತ್ತರಿಸಿರೋದು ಕಾಣ್ತಿದೆ. ಸೈಡ್ ಎಡ್ಜ್ ನಲ್ಲಿ  ಇರಬೇಕಾದ 7 ಗೆರೆಗಳು ಇಲ್ಲ. ಅಲ್ಲದೆ ಅಸಲಿ ನೋಟಿನ ನಾಲ್ಕು ಮೂಲೆಗಳು ಸ್ಪಷ್ಟವಾಗಿದ್ದು, ನಕಲಿ ನೋಟಿನ ಮೂಲೆಗಳು ಅನುಮಾನ ಮೂಡಿಸುವಂತಿದೆ. ಇದೀಗ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com