ಬೆಳಗಾವಿ: 34 ಜೀತದಾಳುಗಳ ರಕ್ಷಣೆ

23 ಮಂದಿ ಪುರುಷರು ಹಾಗೂ 8 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು 34 ಮಂದಿ ಜೀತದಾಳುಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರ್ನಾಟಕ: 23 ಮಂದಿ ಪುರುಷರು ಹಾಗೂ 8 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು 34 ಮಂದಿ ಜೀತದಾಳುಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ರಕ್ಷಿಸಲಾಗಿದೆ.

ಆರೋಪಿ ರಂಗಯ್ಯ 10 ಸಾವಿರ ಹಾಗೂ ಐವತ್ತು ಸಾವಿರ ಮುಂಗಡ ಹಣ ನೀಡಿ ಇವರನ್ನೆಲ್ಲಾ ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದ. ರಂಗಯ್ಯನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ರಕ್ಷಣೆಗೊಂಡ ಎಲ್ಲರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರನ್ನೆಲ್ಲಾ ನಾಗಕರ್ನೂಲ್ ಹಾಗೂ ಮೆಹಬೂಬ ನಗರ ಜಿಲ್ಲೆಗಳಿಂದ ರಕ್ಷಿಸಲಾಗಿದೆ.

ರಕ್ಷಿಸಿದ ಜೀತದಾಳುಗಳನ್ನು ಚಿಕ್ಕೋಡಿ ಪೊಲೀಸರ ಸಮ್ಮುಖಕ್ಕೆ ನೀಡಿದ್ದು,ಅವರನ್ನೆಲ್ಲಾ ಅವರವರ ಸ್ವಗ್ರಾಮಕ್ಕೆ ತೆರಳಲು ಅನುಕೂಲ ಮಾಡಿಕೊಡುವಂತೆ, ರಾಷ್ಟ್ರೀಯ  ಆದಿವಾಸಿ ಏಕತಾ  ಕೌನ್ಸಿಲ್ ಸೂಚಿಸಿದೆ.

ರಂಗಯ್ಯ ನಮಗೆ ಯಾವುದೇ ಹಣ ನೀಡಿರಲಿಲ್ಲ, ಆತ ನಮಗೆ ಊಟ ನೀಡುತ್ತಿದ್ದ, ಅನಾರೋಗ್ಯವಿದ್ದರೂ ನಮ್ಮನ್ನು ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಬಿಡುಗಡೆಗೊಂಡ ಜೀತದಾಳುಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com