ಮಂಗಳೂರು: ನೋಟ್ ನಿಷೇಧದ ಬಿಸಿ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ ಸದಾನಂದ ಗೌಡ ಅವರಿಗೂ ತಟ್ಟಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಸಹೋದರ ಡಿ.ವಿ.ಭಾಸ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಸದಾನಂದ ಗೌಡ ಅವರು ಇಂದು ಜ್ಯೋತಿ ವೃತ್ತದ ಬಳಿ ಇರುವ ಆಸ್ಪತ್ರೆಗೆ ಸಹೋದರನ ಮೃತ ದೇಹ ಒಯ್ಯಲು ಆಗಮಿಸಿದ್ದರು. ಈ ವೇಳೆ ಡಿಸಾcರ್ಜ್ ಬಿಲ್ ಕಟ್ಟುವಾಗ ಹಳೆ ನೋಟುಗಳನ್ನು ಸದಾನಂದ ಗೌಡ ಅವರು ಹಳೆ ನೋಟ್ ಗಳನ್ನು ನೀಡಿದ್ದಾರೆ. ಆದರೆ ಆಸ್ಪತ್ರೆ ಸಿಬಂದಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಈ ವೇಳೆ ಕೆಲ ಹೊತ್ತು ಡಿವಿಎಸ್ ಜೊತೆಗಿದ್ದವರು ವಾಗ್ವಾದವನ್ನೂ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಬಳಿಕ ಬೇರೆ ನೋಟುಗಳನ್ನು ತಂದು ಬಿಲ್ ಭರಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸದ ಸಚಿವರು, ಆಸ್ಪತ್ರೆಯಲ್ಲಿ ಹಳೆ ನೋಟ್ ತೆಗೆದುಕೊಳ್ಳಬೇಕು ಎಂಬ ನಿಯಮ ಇದೆ. ಆದರೆ ಹಳೆ ನೋಟ್ ಗಳನ್ನು ತೆಗೆದುಕೊಳ್ಳದಿರುವ ಲಿಖಿತವಾಗಿ ಬರೆದುಕೊಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.