ಹಾಪ್ ಕಾಮ್ಸ್ ಗಳಲ್ಲಿ ಸದ್ಯವೇ ಪ್ಲಾಸ್ಟಿಕ್ ಹಣ ಬಳಕೆ ಜಾರಿ

ಪ್ರತಿದಿನ ತರಕಾರಿ ಮತ್ತು ಹಾಲಿಗೆ ಚಿಲ್ಲರೆ ಕೊಡಲು ಹಣ ಇಲ್ಲ ಎಂದು ಬೇಜಾರು ಮಾಡಿಕೊಂಡಿದ್ದೀರಾ...
ಲಾಲ್ ಬಾಗ್ ನಲ್ಲಿರುವ ಹಾಪ್ ಕಾಮ್ಸ್ ಮಳಿಗೆ
ಲಾಲ್ ಬಾಗ್ ನಲ್ಲಿರುವ ಹಾಪ್ ಕಾಮ್ಸ್ ಮಳಿಗೆ
ಬೆಂಗಳೂರು: ಪ್ರತಿದಿನ ತರಕಾರಿ ಮತ್ತು ಹಾಲಿಗೆ ಚಿಲ್ಲರೆ ಕೊಡಲು ಹಣ ಇಲ್ಲ ಎಂದು ಬೇಜಾರು ಮಾಡಿಕೊಂಡಿದ್ದೀರಾ? ಹೊಸ 2 ಸಾವಿರ ನೋಟಿಗೆ ಚಿಲ್ಲರೆ ಸಿಗುತ್ತಿಲ್ಲವೇ? ಈ ಸಮಸ್ಯೆಯಿಂದ ಜನರನ್ನು ಪಾರು ಮಾಡಲು ಹಾಪ್ ಕಾಮ್ಸ್ ಮಳಿಗೆಗಳು ಕಾರ್ಡು ಸ್ವೈಪಿಂಗ್ ಯಂತ್ರಗಳನ್ನು ಸದ್ಯದಲ್ಲಿಯೇ ಅಳವಡಿಸಲಿವೆ.
ಇದಕ್ಕೆ ಮುಖ್ಯ ಕಾರಣ 500 ಮತ್ತು 1000 ನೋಟುಗಳ ನಿಷೇಧದ ಬಳಿಕ ಬೆಂಗಳೂರಿನ ಅನೇಕ ವ್ಯಾಪಾರಿಗಳಿಗೆ ಭಾರೀ ನಷ್ಟವುಂಟಾಗಿದೆ. ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಕೃಷ್ಣ ಅವರು ಹೇಳುವ ಪ್ರಕಾರ ಕಳೆದ 15 ದಿನಗಳಲ್ಲಿ ಒಟ್ಟಾರೆ ವ್ಯಾಪಾರದಲ್ಲಿ ಶೇಕಡಾ 25ರಷ್ಟು ಕುಸಿತ ಕಂಡುಬಂದಿದೆ.
ಈ ಸಮಸ್ಯೆಯಿಂದ ಪಾರಾಗಲು ಇನ್ನೊಂದು ವಾರದೊಳಗಡೆ ಹಾಪ್ ಕಾಮ್ಸ್ ಗಳಲ್ಲಿ ಕಾರ್ಡು ಸ್ವೈಪಿಂಗ್ ಮೆಶಿನ್ ಗಳನ್ನು ಅಳವಡಿಸಲಾಗುವುದು. ಈ ಮೂಲಕ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳುತ್ತಾರೆ.
500, 1000 ಕರೆನ್ಸಿಗಳ ನಿಷೇಧದ ಬಳಿಕ ನಮ್ಮ ಅಂಗಡಿಯಲ್ಲಿ ಅಷ್ಟೊಂದು ಗ್ರಾಹಕರಿಲ್ಲ. ಎಲ್ಲರೂ ನೋಟು ಹಿಡಿದುಕೊಂಡು ಬರುತ್ತಾರೆ, ನಮ್ಮಲ್ಲಿ ಕಾರ್ಡು ಸ್ವೈಪಿಂಗ್ ಮೆಶಿನ್ ಕೂಡ ಇಲ್ಲ, ಹೀಗಾಗಿ ವ್ಯಾಪಾರ ಕಡಿಮೆಯಾಗಿಬಿಟ್ಟಿದೆ ಎನ್ನುತ್ತಾರೆ ಲಾಲ್ ಬಾಗ್ ನ ಹಾಪ್ ಕಾಮ್ಸ್ ಮಳಿಗೆಯ ವ್ಯಾಪಾರಿ.
ಹಾಪ್ ಕಾಮ್ಸ್ ಮಳಿಗೆಗೆ ನಿತ್ಯ ಸಾಮಾನು, ತರಕಾರಿಗಳನ್ನು ಕೊಳ್ಳಲು ಬರುವ ಗ್ರಾಹಕರು ಕೂಡ ಕಾರ್ಡುಗಳನ್ನು ಸ್ವೀಕರಿಸುವ ಯಂತ್ರವನ್ನು ಅಳವಡಿಸಿದರೆ ಉತ್ತಮ ಎಂದು ಬಯಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com