
ಮೈಸೂರು: ಸಾವಿರಾರು ಕೋಟಿ ರೂ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರು ಮದ್ಯದ ದೊರೆ ವಿಜಯ್ ಮಲ್ಯ ಸಾಲ ಮನ್ನಾ ಮಾಡಿದಂತೆ ತಮ್ಮ ಸಾಲವನ್ನು ಮನ್ನಾ ಮಾಡಿ ಎಂದು ರೈತನೊಬ್ಬ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಣ್ಣೇದೊಡ್ಡಿ ಗ್ರಾಮದ ರೈತ ಮುಖಂಡೆ ಸುನಂದಮ್ಮ ಅವರ ಪುತ್ರ ಸುಧಾಕರ್ ತಮ್ಮ 7 ಲಕ್ಷ ರು ಸಾಲವನ್ನು ಮನ್ನಾ ಮಾಡಿ ಎಂದು ಶಿವಪುರ ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಮಾಡಿದ್ದಾರೆ.
2005- 06 ನೇ ಸಾಲಿನಲ್ಲಿ ಶಿವಪುರದಲ್ಲಿರುವ ಎಸ್‍ಬಿಐ ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್ ಸಾಲ ಮತ್ತು ಬೆಳೆ ಸಾಲವನ್ನ ಪಡೆದಿದ್ದರು. ಅಂದು ಪಡೆದ ಸಾಲವೀಗ ಅಸಲು ಬಡ್ಡಿ ಸೇರಿಸುಮಾರು ಏಳು ಲಕ್ಷ ರೂಪಾಯಿ ದಾಟಿದೆ. ಸರಿಯಾಗಿ ಮಳೆ ಬಾರದ ಕಾರಣ ಈ ಸಾಲವನ್ನು ತೀರಿಸಲು ಆಗುತ್ತಿಲ್ಲ. ನೀವು ಈಗ ಹೇಗೆ ಸಾಲ ತೀರಿಸಲಾಗದೇ ದೇಶ ಬಿಟ್ಟು ಹೋಗಿರೋ ಮದ್ಯದ ದೊರೆ ವಿಜಯ್ ಮಲ್ಯರ ಸಾವಿರಾರು ಕೋಟಿ ಸಾಲ ಮನ್ನ ಮಾಡಿರುವಂತೆ ನಮ್ಮ ಸಾಲವನ್ನೂ ಮನ್ನಾ ಮಾಡಿ ಎಂದು ಕೋರಿದ್ದಾರೆ.
ಬರ ಬೆಳೆ ನಾಶ ದಿಂದಾಗಿ ಸಾಲ ಕಟ್ಟಲಾಗುತ್ತಿಲ್ಲ, ಬ್ಯಾಂಕ್ ನವರು ನೋಟೀಸ್ ಮೇಲೆ ನೋಟಿಸ್ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ, ರೈತರು ಕಷ್ಟದಲ್ಲಿದ್ದು ಬ್ಯಾಂಕ್ ಗಳು ರೈತರು ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಹೇಳಿದ್ದಾರೆ.
Advertisement