ಬಿಬಿಸಿ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಪರಿಸರವಾದಿ ಸಾಲು ಮರದ ತಿಮ್ಮಕ್ಕ ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ...
ಸಾಲು ಮರದ ತಿಮ್ಮಕ್ಕ
ಸಾಲು ಮರದ ತಿಮ್ಮಕ್ಕ

ಬೆಂಗಳೂರು: ಪರಿಸರವಾದಿ ಸಾಲು ಮರದ ತಿಮ್ಮಕ್ಕ ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

ಬಿಬಿಸಿ ಪ್ರಕಟಿಸಿದ 2016ನೇ ಸಾಲಿನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ  ಭಾರತದ ಐವರು ಮಹಿಳೆಯರು ಸೇರಿದಂತೆ ತಮ್ಮ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟ  105 ವರ್ಷದ ಸಾಲುಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ.   
 
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್‌ನ ತಿಮ್ಮಕ್ಕ 80 ವರ್ಷಗಳಲ್ಲಿ 400 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಬಿಬಿಸಿ ಹೇಳಿದೆ.

ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ಮಹಾರಾಷ್ಟ್ರದ ಸಾಂಗ್ಲಿಯ 20 ವರ್ಷದ ಕಂಪ್ಯೂಟರ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಗೌರಿ ಚಿಂದಾರ್ಕರ್‌, ಟ್ರ್ಯಾಕ್ಟರ್ಸ್‌ ಆ್ಯಂಡ್‌ ಫಾರ್ಮ್‌ ಇಕ್ವಿಪ್‌ಮೆಂಟ್‌ ಲಿಮಿಟೆಡ್‌ನ ಸಿಇಒ ಮಲ್ಲಿಕಾ  ಶ್ರೀನಿವಾಸನ್‌ ಹಾಗೂ ಬರಹಗಾರ್ತಿಯಾಗಿ ಹೆಸರು ಮಾಡಿರುವ ಮುಂಬೈನ ಚಿತ್ರನಟಿ ನೇಹಾ ಸಿಂಗ್‌ ಅವರ ಹೆಸರು ಪಟ್ಟಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com