ಮೃತದೇಹ ಹೊರತೆಗೆದು ಮತ್ತೆ ಮರಣೋತ್ತರ ಪರೀಕ್ಷೆ ನಡೆಸಲು ಡಿ.ಕೆ ರವಿ ಸಂಬಂಧಿಕರ ಆಗ್ರಹ

ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ದೇಹವನ್ನು ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಜವಾದ ಕಾರಣ ಏನೆಂದು ಪತ್ತೆ ಹಚ್ಚಬೇಕೆಂದು ...
ಡಿ.ಕೆ ರವಿ
ಡಿ.ಕೆ ರವಿ
Updated on

ತುಮಕೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ದೇಹವನ್ನು ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಜವಾದ ಕಾರಣ ಏನೆಂದು ಪತ್ತೆ ಹಚ್ಚಬೇಕೆಂದು ರವಿ ಅವರ ಕುಟುಂಬಸ್ಥರು ಆಗ್ರಹಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ರವಿ ಅವರ ತಾಯಿ ಗೌರಮ್ಮ, ತಮ್ಮ ಮಗನದ್ದು ಆತ್ಮಹತ್ಯೆ ಎಂದು ಸಿಬಿಐ ವರದಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಅವರ ಪಕ್ಷದ ಕೆಲವು ಮಂದಿ ಮರಣೋತ್ತರ ಪರೀಕ್ಷೆ ವರದಿಯನ್ನು ತಿದ್ದಿಸಿದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತ ಹೇಡಿಯಲ್ಲ ಎಂದು ಅವರು ಹೇಳಿದ್ದಾರೆ.

ರವಿ ದೇಹವನ್ನು ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಬೇಕು ಇಲ್ಲದಿದ್ದರೇ ಕೋಲಾರ ಜಿಲ್ಲೆಯ ಜನತೆ ಜೊತೆ ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಡಿ.ಕೆ ರವಿ ಅವರ ಮಾವ ಹನುಮಂತರಾಯಪ್ಪ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಪರಮಾಪ್ತರಾಗಿದ್ದಾರೆ. ಘಟನೆ ನಂತರ ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರನ್ನ ವಿದೇಶಕ್ಕೆ ಕಳುಹಿಸಿದ್ದಾರೆ, ರವಿ ಅವರದ್ದು ಕೊಲೆ ಎಂದು ಡಿ.ಕೆ ರವಿ ಅವರ ಸಹೋದರ ಡಿ.ಕೆ ರಮೇಶ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com