ತುಮಕೂರಿನಲ್ಲಿ ಮಿತಿಮೀರಿದ ಹಳೇಯ ನೋಟುಗಳ ಅಕ್ರಮ ವಿನಿಮಯ?

ತುಮಕೂರಿನಲ್ಲಿ ಹಳೇಯ ನೋಟುಗಳ ಅಕ್ರಮ ವಿನಿಮಯ ಹೆಚ್ಚಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣಗಳಲ್ಲಿ ಹಲವರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು:  ತುಮಕೂರಿನಲ್ಲಿ ಹಳೇಯ ನೋಟುಗಳ ಅಕ್ರಮ ವಿನಿಮಯ ಹೆಚ್ಚಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿದ್ದಾರೆ.

ಎರಡು ಖಾಸಗಿ ಬ್ಯಾಂಕ್ ಗಳ ಅಧಿಕಾರಿಗಳು ಹಳೇಯ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಎಚ್ ಡಿಎಫ್ ಸಿ ಬ್ಯಾಂಕ್ ನ ರಿಕವರಿ ಅಧಿಕಾರಿ ಉದಯ್ ಮತ್ತು ಚೋಳಮಂಡಳ ಫೈನಾನ್ಸ್ ನ ವಾಹನ ವಸೂಲಾತಿ ಅಧಿಕಾರಿ ಪದ್ನರಾಜ್ ಎಂಬುವರನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ವಸೂಲಾತಿ ಅಧಿಕಾರಿಗಳು ಗಿರಿನಗರದ ಗಣೇಶ ದೇವಾಲಯದಲ್ಲಿದ್ದಾಗ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 2 ಸಾವಿರ ಮುಖಬೆಲೆಯ 3 ಲಕ್ಷ ರು ಹಣವನ್ನು ವಶ ಪಡಿಸಿಕೊಂಡಿದ್ದಾರೆ.

ಇದೇ ವೇಳೆ ಕುಣಿಗಲ್ ಪೊಲೀಸರು ರವಿ ಮತ್ತು ಪ್ರಕಾಶ್ ಎಂಬುವರನ್ನು ಬಂಧಿಸಿ 6.06 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಇಬ್ಬರು ಶೇ. 20 ರಷ್ಟು ಕಮಿಷನ್ ಆಧಾರದ ಮೇಲೆ ಹಳೇಯ ನೋಟುಗಳನ್ನು ಬದಲಾಯಿಸಿಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com