
ಶಿರಸಿ: ಕಾಡು ಹಂದಿ ಬೇಟೆಯಾಡಲು ಬಂದಿದ್ದ ತಂಡವೊಂದು ಸಿಡಿಸಿದ ಗುಂಡಿಗೆ ಆಕಸ್ಮಿಕವಾಗಿ ವ್ಯಕ್ತಿ ಬಲಿಯಾಗಿರುವ ಘಟನೆ ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸಿದ್ದಾಪುರ ತಾಲೂಕಿನ ದೇವಿಸರೆ ಗ್ರಾಮದ ನಾಗರಾಜ್ ನಾಯ್ಕರ್ ಮೃತ ವ್ಯಕ್ತಿ. ನಾಗರಾಜ್ ಭಾನುವಾರ ಸುಮಾರು 10 ರಿಂದ 15 ಮಂದಿ ತಂಡವಿದ್ದ ಗುಂಪಿನ ಜೊತೆ ಕಾಡು ಹಂದಿ ಭೇಟೆಗೆ ಹೊರಟಿದ್ದ,ಈ ವೇಳೆ ತಂಡದಲ್ಲಿದ್ದ ವ್ಯಕ್ತಿಯ ಕೈಯ್ಯಲ್ಲಿದ್ದ ಬಂದೂಕಿನಿಂದ ನಾಗರಾಜ್ ಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಸ್ಥಳಕ್ಕೆ ಶಿರಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದಾನೆ ಎನ್ನಲಾಗಿದೆ,. ಆದರೆ ಪೊಲೀಸರಿಗೆ ಈ ಬಗ್ಗಾ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಎಫ್ ಐ ಆರ್ ದಾಖಲಾಗಿದ್ದು, ಗುಂಡು ಹಾರಿಸಿದ್ದು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement